ADVERTISEMENT

ಮಂಗರ್‌ನಲ್ಲಿ ಗುಂಡಿನ ದಾಳಿಯು ಹಿಂದುತ್ವದ ಮೇಲಿನ ದಾಳಿಯಲ್ಲವೇ?: ಸಂಜಯ್ ರಾವುತ್

ಏಜೆನ್ಸೀಸ್
Published 30 ಅಕ್ಟೋಬರ್ 2020, 7:59 IST
Last Updated 30 ಅಕ್ಟೋಬರ್ 2020, 7:59 IST
ಶಿವಸೇನೆ ಮುಖಂಡ ಸಂಜಯ್ ರಾವುತ್
ಶಿವಸೇನೆ ಮುಖಂಡ ಸಂಜಯ್ ರಾವುತ್   

ಮುಂಬೈ:ಬಿಹಾರದ ಮಂಗರ್‌ನಲ್ಲಿ ನಡೆದ ಗುಂಡಿನ ದಾಳಿಯು ಹಿಂದುತ್ವ ಮೇಲೆ ನಡೆದ ದಾಳಿಯಾಗಿದೆ. ಬಿಹಾರದ ಬಿಜೆಪಿ ರಾಜ್ಯಪಾಲರು ಏಕೆ ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಶುಕ್ರವಾರ ಪ್ರಶ್ನಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಬಿಹಾರದ ಮಂಗರ್‌ನಲ್ಲಿ ದುರ್ಗಾ ದೇವಿ ಮೂರ್ತಿಯ ವಿಸರ್ಜನಾ ಮೆರವಣಿಗೆ ವೇಳೆ ಹಿಂಸಾಚಾರ ಭುಗಿಲೆದ್ದಿತು. ಇದಾದ ಬಳಿಕ ಪೊಲೀಸರು ಗುಂಡು ಹಾರಿಸಿದರು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡರು. ಇದು ಹಿಂದುತ್ವದ ಮೇಲಿನ ದಾಳಿ' ಎಂದುಆರೋಪಿಸಿದರು.

ಒಂದು ವೇಳೆ ಮಹಾರಾಷ್ಟ್ರ ಅಥವಾ ಪಶ್ಚಿಮ ಬಂಗಾಳದಲ್ಲಿ ಇಂತಹ ಘಟನೆ ಸಂಭವಿಸಿದ್ದರೆ ರಾಜ್ಯಪಾಲರು ಮತ್ತು ಬಿಜೆಪಿ ನಾಯಕರು ರಾಷ್ಟ್ರಪತಿಗಳ ಆಡಳಿತಕ್ಕೆ ಒತ್ತಾಯಿಸುತ್ತಿದ್ದರು. ಹಾಗಾದರೆ, ಘಟನೆಯ ಬಗ್ಗೆ ಬಿಹಾರ ರಾಜ್ಯಪಾಲರು ಮತ್ತು ಬಿಜೆಪಿ ನಾಯಕರು ಏಕೆ ಪ್ರಶ್ನೆಗಳನ್ನು ಎತ್ತುತ್ತಿಲ್ಲ? ಎಂದು ಕಿಡಿಕಾರಿದರು.

ADVERTISEMENT

ಮತದಾನ ನಡೆಯುತ್ತಿರುವ ಬಿಹಾರದ ಜಿಲ್ಲೆಯಲ್ಲಿ ನಡೆದ ಗಲಭೆ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಂಗರ್‌ ಜಿಲ್ಲಾಧಿಕಾರಿ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ಚುನಾವಣಾ ಆಯೋಗ ಆದೇಶಿಸಿದೆ.

ಘಟನೆಯ ಬಗ್ಗೆ ಮಗಧ್‌ನ ವಿಭಾಗೀಯ ಆಯುಕ್ತ ಅಸಂಗ್ಬಾ ಚುಬಾ ಎಒ ಅವರು ಏಳು ದಿನಗಳೊಂದಿಗೆ ತನಿಖೆ ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ. ಹೊಸ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರನ್ನು ಇಂದು ಮಂಗರ್‌ನಲ್ಲಿ ನೇಮಿಸಲಾಗುವುದು.

ಘಟನೆ ಬಳಿಕ ದುಷ್ಕರ್ಮಿಗಳು ಮಂಗರ್‌ನ ಉಪ ವಿಭಾಗೀಯ ಅಧಿಕಾರಿ (ಎಸ್‌ಡಿಒ) ಮತ್ತು ಎಸ್‌ಪಿ ಕಚೇರಿಗೆ ಹಾನಿ ಮಾಡಿದ್ದು, ಹಲವಾರು ವಾಹನಗಳಿಗೆ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಗುರುವಾರ ಕಚೇರಿಗೂ ಹಾನಿಯಾಗಿದೆ.

ಅಕ್ಟೋಬರ್ 26 ರಂದು ದುರ್ಗಾದೇವಿ ವಿಗ್ರಹದ ವಿಸರ್ಜನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿ ಮೃತಪಟ್ಟಿದ್ದನ್ನು ಖಂಡಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಮಂಗರ್‌ನ ಎಸ್‌ಪಿ ಮತ್ತು ಎಸ್‌ಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.