ADVERTISEMENT

ಸಂಗೀತ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 10:02 IST
Last Updated 17 ಫೆಬ್ರುವರಿ 2020, 10:02 IST
   

ಮುಂಬೈ:ಲೈಂಗಿಕ ದೌರ್ಜನ್ಯಎಸಗಿದಆರೋಪದಲ್ಲಿ 55 ವರ್ಷ ಪ್ರಾಯದ ಸಂಗೀತಶಿಕ್ಷಕನನ್ನು ಪೊಲೀಸರುಸೋಮವಾರ ಬಂಧಿಸಿದ್ದಾರೆ.

ಆರೋಪಿಯನ್ನುಭಾರತ್ಪಂಚಾಲಿಅಲಿಯಾಸ್ರಾಜುಎಂದು ಗುರುತಿಸಲಾಗಿದೆ.ದೂರು ದಾಖಲಿಸಿರುವ ಸಂತ್ರಸ್ತೆ ಬಾಲಕಿಯಾಗಿರುವಾಗಲೈಂಗಿಕ ದೌರ್ಜನ್ಯ ನಡೆದಿದೆ. ಬಳಿಕ ಅವರು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ.

2007ರಿಂದ 2010ರವರೆಗೂಆರೋಪಿಯು ಗೀಟಾರ್‌ ಹೇಳಿ ಕೊಡಲು ದೂರುದಾರಳ ಮನೆಗೆ ಹೋಗುತ್ತಿದ್ದ. ಈ ವೇಳೆ ಲೈಂಗಿಕ ದೌರ್ಜನ್ಯ ನಡೆದಿದೆಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಪ್ರಸ್ತುತಸಂತ್ರಸ್ತೆಯುಅಮೆರಿಕಕಾಲೇಜಿನಲ್ಲಿ ಕಲಿಯುತ್ತಿದ್ದಾರೆ, ಭಾನುವಾರ ಮುಂಬೈಗೆ ಬಂದ ಅವರು ಆರೋಪಿ ಸಂಗೀತ ಶಿಕ್ಷಕನವಿರುದ್ದದೂರು ದಾಖಲಿಸಿದ್ದಾರೆ. ಪ್ರಕರಣವನ್ನುದಾಖಲಿಸಿರುವಪೊಲೀಸರು ಆರೋಪಿಯನ್ನುಬಂಧಿಸಿದ್ದಾರೆ.

ಆರೋಪಿಯುಸಂಗೀತ ತರಗತಿಯ ಸಮಯದಲ್ಲಿ ಲೈಂಗಿಕದೌರ್ಜನ್ಯಎಸಗುತ್ತಿದ್ದ ಹಾಗೂಅಶ್ಲೀಲಮಾತುಗಳನ್ನು ಆಡುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.

ಆರೋಪಿಯ ಮೇಲೆ ಭಾರತೀಯ ದಂಡ ಸಂಹಿತೆ 354 (ಲೈಂಗಿಕ ಕಿರುಕುಳ) 509 (ಅಪಮಾನ) ಮತ್ತು 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿಪೊಲೀಸರುಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.