ADVERTISEMENT

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮಹಿಳಾ ಘಟಕ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 14:27 IST
Last Updated 21 ಅಕ್ಟೋಬರ್ 2022, 14:27 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತನ್ನ ಮಹಿಳಾ ಘಟಕವನ್ನು ವಿಸರ್ಜಿಸಿದ್ದು, ಘಟಕದ ಮಹಿಳಾ ಸದಸ್ಯೆಯೊಬ್ಬರು ‘ಇದು ಅನ್ಯಾಯ ಮತ್ತು ಕಾನೂನುಬಾಹಿರ’ ಎಂದು ಸಾರ್ವಜನಿಕವಾಗಿ ದೂರಿದ್ದಾರೆ.

ಹಿಜಾಬ್‌ ಕುರಿತು ಮಹಿಳಾ ಘಟಕದ ಸದಸ್ಯೆಯರೊಂದಿಗಿನ ಭಿನ್ನಾಭಿಪ್ರಾಯವೇ ಈ ಕ್ರಮಕ್ಕೆ ಕಾರಣವೆಂದೂ ಸದಸ್ಯರು ಆರೋಪಿಸಿದ್ದಾರೆ.

‘ಮಹಿಳಾ ಘಟಕವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಅದು ಮತ್ತೆ ಕಾರ್ಯನಿರ್ವಹಿಸಲಿದೆ’ಎಂದು ಮಂಡಳಿಯ ಕಾರ್ಯಕಾರಿ ಸದಸ್ಯ ಖಾಸಿಂ ರಸೂಲ್ ಇಲ್ಯಾಸ್ ವಿವರಣೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.