ADVERTISEMENT

ಉತ್ತರ ಪ್ರದೇಶ: ಮಗನಿಗೆ ನರೇಂದ್ರ ಮೋದಿ ಹೆಸರಿಟ್ಟ ಮುಸ್ಲಿಂ ಮಹಿಳೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:46 IST
Last Updated 25 ಮೇ 2019, 19:46 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ಗೊಂಡಾ (ಉತ್ತರಪ್ರದೇಶ): ಪ್ರಧಾನಿ ಮೋದಿ ಅವರ ವರ್ಚಸ್ಸಿನಿಂದ ಪ್ರಭಾವಿತರಾದ ಮುಸ್ಲಿಂ ಮಹಿಳೆಯೊಬ್ಬರು ತನ್ನ ನವಜಾತ ಶಿಶುವಿಗೆ ‘ನರೇಂದ್ರ ದಾಮೋದರದಾಸ್‌ ಮೋದಿ’ ಎಂದು ನಾಮಕರಣ ಮಾಡಿದ್ದಾರೆ.

ಇಲ್ಲಿನ ಪರ್ಸಾಪುರ್ ಮಹ್ರೌರ್ ಗ್ರಾಮದ ಮೈನಾಜ್ ಬೇಗಂ ತನ್ನ ಮಗುವಿಗೆ ಈ ಹೆಸರಿಟ್ಟಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದದಿನವೇ ಮೈನಾಜ್‌ ಅವರು ಮಗುವಿಗೆ ಮೋದಿಯ ಹೆಸರಿಡಲು ತೀರ್ಮಾನಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಟುಂಬದವರು ಅವರ ಮನವೊಲಿಸಲು ಯತ್ನಿಸಿದ್ದರೂ, ಮೈನಾಜ್‌ ನಿರ್ಧಾರ ಬದಲಿಸಲಿಲ್ಲ ಎಂದು ಮಹಿಳೆಯ ಮಾವ ಇದ್ರಿಸ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.