ADVERTISEMENT

ನಮಾಜ್‌ ಸಲ್ಲಿಸಲು ಮಹಿಳೆಯರಿಗೂ ಮಸೀದಿ ಪ್ರವೇಶ

ಸುಪ್ರೀಂ ಕೋರ್ಟ್‌ಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ

ಪಿಟಿಐ
Published 29 ಜನವರಿ 2020, 20:06 IST
Last Updated 29 ಜನವರಿ 2020, 20:06 IST
   

ನವದೆಹಲಿ: ಪುರುಷರ ರೀತಿಯಲ್ಲಿ ಮಹಿಳೆಯರಿಗೂನಮಾಜ್‌ ಸಲ್ಲಿಸಲು ಮಸೀದಿ ಪ್ರವೇಶಕ್ಕೆ ಅನುಮತಿ ಇದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರವೇಶ ಕಲ್ಪಿಸಲು ನ್ಯಾಯಾಂಗ ಮಧ್ಯಪ್ರವೇಶಿಸಬೇಕು ಎಂದು ಯಾಸ್ಮೀನ್‌ ಝುಬೇರ್‌ ಅಹ್ಮದ್‌ ಪೀರ್ಜಾದೆ ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಮಂಡಳಿಯು ನ್ಯಾಯಾಲಯಕ್ಕೆ ಈ ಉತ್ತರ ನೀಡಿದೆ.

‘ನಮಾಜ್‌ ಅಥವಾ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಮಹಿಳೆ ಮುಕ್ತವಾಗಿ ಮಸೀದಿ ಪ್ರವೇಶಿಸಬಹುದಾಗಿದೆ. ಇದು ಮಹಿಳೆಯ ಆಯ್ಕೆ’ ಎಂದು ಮಂಡಳಿಯ ಕಾರ್ಯದರ್ಶಿ ಎಂ.ಆರ್‌. ಶಮಶಾದ್‌ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು, ಮಂಡಳಿಯ ಹೇಳಿಕೆಯನ್ನು ಪರಿಶೀಲನೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.