ADVERTISEMENT

ಲವ್‌ ಜಿಹಾದ್ ಆರೋಪ: ಯುವಕ ಬಂಧನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 14:51 IST
Last Updated 25 ಡಿಸೆಂಬರ್ 2020, 14:51 IST

ಲಖನೌ: ಹುಟ್ಟುಹಬ್ಬದ ಪಾರ್ಟಿಯ ನಂತರ ಹಿಂದೂ ಹುಡುಗಿಯೊಬ್ಬಳೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದನೆಂದು ಹೇಳಲಾದ ಮುಸ್ಲಿಂ ಯುವಕನನ್ನು ‘ಲವ್ ಜಿಹಾದ್’ ಆರೋಪದಡಿ ಮತಾಂತರ ನಿಷೇಧ ಕಾಯ್ದೆಯಡಿಯಲ್ಲಿ ಬಂಧಿಸಿರುವ ಘಟನೆ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.

17 ವರ್ಷದ ಬಾಲಕಿ ಮತ್ತು ಆಕೆಯ ತಾಯಿ ‘ಲವ್‌ ಜಿಹಾದ್‌’ ಆರೋಪವನ್ನು ಅಲ್ಲಗಳೆದಿದ್ದಾರೆ. ‘ಮುಸ್ಲಿಂ ಯುವಕ ಬಾಲಕಿಯನ್ನು ಕರೆದೊಯ್ದು ಮತಾಂತರಗೊಳಿಸಲು ಯತ್ನಿಸಿದ್ದಾನೆ ಎಂದು ಬಾಲಕಿಯ ತಂದೆ ಎಫ್‌ಐಆರ್‌ ದಾಖಲಿಸಿದ ನಂತರ ಯುವಕನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಯುವಕ ಮತ್ತು ಬಾಲಕಿ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ಸಂದರ್ಭ ಅವರನ್ನು ಕೆಲವರು ತಡೆದರು. ಯುವಕನನ್ನು ಕಳ್ಳನೆಂದು ತಿಳಿದು, ಪೊಲೀಸ್‌ ವಶಕ್ಕೆ ನೀಡಿದರು. ಬಾಲಕಿಯನ್ನು ಮನೆಗೆ ಕಳುಹಿಸಲಾಯಿತು’ ಎಂದು ಗ್ರಾಮದ ಪಂಚಾಯತ್‌ ಮುಖ್ಯಸ್ಥ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.