ADVERTISEMENT

ಮುಸ್ಲಿಮರು, ಕ್ರೈಸ್ತರು ಹಿಂದೂಗಳೇ ಆಗಿದ್ದರು: ಹಿಮಂತ ಬಿಸ್ವಾ ಶರ್ಮಾ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 20:16 IST
Last Updated 10 ಜುಲೈ 2021, 20:16 IST
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ   

ಗುವಾಹಟಿ: ‘ಭಾರತದಲ್ಲಿರುವ ಎಲ್ಲಾ ಮುಸ್ಲಿಮರು ಮತ್ತು ಕ್ರೈಸ್ತರು ತಲೆಮಾರುಗಳ ಹಿಂದೆ ಹಿಂದೂಗಳೇ ಆಗಿದ್ದರು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಪಾದಿಸಿದ್ದಾರೆ. ಈ ಮೂಲಕ ರಾಜೋರಿ ದಳದ ಶಾಸಕ ಅಖಿಲ್ ಗೊಗೊಯಿ ಜತೆಗಿನ ವಾಗ್ವಾದವನ್ನು ಶರ್ಮಾ ಮುಂದುವರಿಸಿದ್ದಾರೆ.

‘ಕಲ್ಕತ್ತಾವಿಶ್ವವಿದ್ಯಾಲಯದಲ್ಲಿ ಅಸ್ಸಾಮಿ ಜನರಿಗೆ ಪ್ರಾತಿನಿಧ್ಯ ಇರಲಿಲ್ಲ. ಬಿಜೆಪಿ ನಾಯಕ ಶ್ಯಾಂ ಪ್ರಸಾದ್ ಮುಖರ್ಜಿ ಅವರುಕಲ್ಕತ್ತಾ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಅಸ್ಸಾಮಿ ಭಾಷೆಗೆ ಪ್ರತ್ಯೇಕ ಭಾಷೆಯ ಸ್ಥಾನಮಾನ ನೀಡಿದ್ದರು’ ಎಂದು ಹಿಮಂತ ಹೇಳಿದ್ದರು. ಇದನ್ನು ಅಲ್ಲಗೆಳೆದಿದ್ದ ಅಖಿಲ್ ಗೊಗೊಯಿ, ‘ಮುಖ್ಯಮಂತ್ರಿ ಹೇಳುತ್ತಿರುವ ಮಾತಿನಲ್ಲಿ ಸತ್ಯ ಇಲ್ಲ. ಅಸ್ಸಾಂ ಜನರ ಅಸ್ಮಿತೆಯನ್ನು ಬಿಜೆಪಿ-ಆರ್‌ಎಸ್‌ಎಸ್‌ ಸಿದ್ಧಾಂತಗಳಿಗೆ ಅಡವಿಡಲಾಗುತ್ತಿದೆ’ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಈ ಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT