ಮುಜಫರ್‌ನಗರ : ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ ಇಕ್ರಮ್ ಎಂಬಾತನನ್ನು 2014 ರಲ್ಲಿ ಗುಂಡು ಹಾರಿಸಿ ಕೊಲೆ ಮಾಡಿದ್ದ ನಾಲ್ವರು ಸಹೋದರರನ್ನು ಅಪರಾಧಿಗಳು ಎಂದು ಪರಿಗಣಿಸಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹30,000 ದಂಡವನ್ನು ವಿಧಿಸಿದೆ.
15 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ನವಾಬ್, ಇನ್ಸಾರ್, ಕದೀರ್ ಮತ್ತು ಇಸ್ಲಾಂ ಅಪರಾಧಿಗಳಾಗಿದ್ದಾರೆ.
ಘಟನೆಯ ಹಿನ್ನಲೆ : 2014 ರ ಜುಲೈ 14ರಂದು ಶಾಮ್ಲಿ ಜಿಲ್ಲೆಯ ಬಲ್ವಾ ಗ್ರಾಮದಲ್ಲಿ ಹಳೆಯ ದ್ವೇಷದಿಂದಾಗಿ ಉಂಟಾದ ಜಗಳದಲ್ಲಿ ಇಕ್ರಮ್ ಎಂಬುವವರನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. ಈ ಜಗಳದಲ್ಲಿ ಹಲವರು ಗಾಯಗೊಂಡಿದ್ದರು. ಶಾಮ್ಲಿಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ವಕೀಲ ವೀರೇಂದ್ರ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.