ADVERTISEMENT

ಮುಜಫ್ಫರ್‌ನಗರ | ಜೈಲಲ್ಲಿ ಮಾಜಿ ಶಾಸಕನಿಗೆ ಮೊಬೈಲ್‌: ಪುತ್ರ ಸೆರೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 14:35 IST
Last Updated 6 ನವೆಂಬರ್ 2025, 14:35 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಮುಜಫ್ಫರ್‌ನಗರ: ಜೈಲಿನಲ್ಲಿರುವ ಮಾಜಿ ಶಾಸಕ ಶಹನವಾಜ್ ರಾಣಾ ಅವರಿಗೆ ಮೊಬೈಲ್‌ ಫೋನ್‌ ನೀಡಿದ ಆರೋಪದ ಮೇಲೆ ಅವರ ಮಗನನ್ನು ಪೊಲೀಸರು ಬಂಧಿಸಿದ್ದಾರೆ. 

ADVERTISEMENT

ಅಬ್ದುಲ್‌ ಅಹದ್‌ ರಾಣಾ ಅವರನ್ನು ಮುಜಫ್ಫರ್‌ನಗರದಲ್ಲಿ ಬುಧವಾರ ರಾತ್ರಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು. 

ಜೈಲರ್‌ ರಾಜೇಶ್‌ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಪರಿಶೀಲನೆ ನಡೆಸಿ, ಶಹನವಾಜ್ ರಾಣಾ ಬಳಿ ಇದ್ದ ಮೊಬೈಲ್‌ ಫೋನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.