ಗುವಾಹಟಿ: ಕುಕಿ ನ್ಯಾಷನಲ್ ಆರ್ಮಿ– ಬರ್ಮೀಸ್ ಸಂಘಟನೆಯ (ಕೆಎನ್ಎ–ಬಿ) ಥಾಂಗ್ಲಿಯಾನ್‌ಕಪ್ ಅವರನ್ನು ಅಸ್ಸಾಂ ರೈಫಲ್ಸ್ ಪಡೆ ಬಂಧಿಸಿದೆ ಎಂಬ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಹೇಳಿಕೆಯನ್ನು ಕೆಎನ್ಎ–ಬಿ ತಳ್ಳಿಹಾಕಿದೆ.
‘ಥಾಂಗ್ಲಿಯಾನ್‌ಕಪ್ ಎನ್ನುವ ಯಾವುದೇ ವ್ಯಕ್ತಿ ಹಾಗೂ ಸಂಘಟನೆಯ ನಡುವೆ ಸಂಬಂಧವಿಲ್ಲ. ಈ ವ್ಯಕ್ತಿಯು ನಮ್ಮ ಸಂಘಟನೆಯವರು ಎಂಬ ಮಾಹಿತಿಯು ಸುಳ್ಳು ಹಾಗೂ ಆಧಾರರಹಿತವಾಗಿದೆ’ ಎಂದು ಕೆಎನ್ಎ–ಬಿ ಪ್ರಚಾರ ವಿಭಾಗದ ನಾಯಕ ಫ್ರಾನ್ಸಿಸ್ ಕುಕಿ ಅವರು ತಿಳಿಸಿದ್ದಾರೆ.
‘ಕೆಎನ್ಎ–ಬಿಯ ಥಾಂಗ್ಲಿಯಾನ್‌ಕಪ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯನ್ನು ಬಿತ್ತರಿಸಲಾಗುತ್ತಿದೆ. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಕೂಡ ಇದೇ ರೀತಿ ಹೇಳಿಕೆಯನ್ನು ನೀಡಿದ್ದಾರೆ. ಇಂಥಹ ದುರುದ್ದೇಶಪೂರಿತ ಆರೋಪಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳು, ಮಾಧ್ಯಮಗಳು ತಪ್ಪು ಮಾಹಿತಿ ನೀಡುವ ಬದಲು ವಾಸ್ತವವನ್ನು ಪರಿಶೀಲಿಸಬೇಕು ಎಂದು ಕೇಳಿಕೊಳ್ಳುತ್ತೇವೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.