ADVERTISEMENT

ಉಚಿತ ಲಸಿಕೆ: ಬಿಜೆಪಿ, ಎನ್‌ಡಿಎ ನೇತೃತ್ವದ ರಾಜ್ಯಗಳನ್ನು ಶ್ಲಾಘಿಸಿದ ನಡ್ಡಾ

ಪಿಟಿಐ
Published 4 ಮೇ 2021, 10:54 IST
Last Updated 4 ಮೇ 2021, 10:54 IST
ಜೆ.ಪಿ.ನಡ್ಡಾ
ಜೆ.ಪಿ.ನಡ್ಡಾ   

ನವದೆಹಲಿ: ಉಚಿತವಾಗಿ ಲಸಿಕೆ ನೀಡುತ್ತಿರುವ ಬಿಜೆಪಿ ಮತ್ತು ಎನ್‌ಡಿಎ ನೇತೃತ್ವದ ರಾಜ್ಯಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶ್ಲಾಘಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ನಡ್ಡಾ,‘ಬಿಜೆಪಿ ಮತ್ತು ಎನ್‌ಡಿಎ ನೇತೃತ್ವದ ರಾಜ್ಯಗಳು ಉಚಿತವಾಗಿ ಲಸಿಕೆ ನೀಡುವ ಮೂಲಕ ಪಕ್ಷದ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ’ ಧ್ಯೇಯವಾಕ್ಯವನ್ನು ಎತ್ತಿ ಹಿಡಿದಿದ್ದಾರೆ. ಈ ರಾಜ್ಯಗಳು ದಲಿತರು, ಬುಡಕಟ್ಟು ಮತ್ತು ಹಿಂದುಳಿದ ಜನಾಂಗವರು ಮತ್ತು ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವುದನ್ನು ನೋಡಿ ನನಗೆ ಹೆಮ್ಮೆಯಾಗುತ್ತಿದೆ’ ಎಂದು ಹೇಳಿದ್ದಾರೆ.

ಭಾರತದಲ್ಲಿ ಜನವರಿ 16ರಿಂದ ಕೋವಿಡ್‌ ಲಸಿಕೆ ಅಭಿಯಾನವು ಆರಂಭವಾಯಿತು. ಮೇ 1ರಿಂದ 18ರಿಂದ 44 ವರ್ಷದೊಳಗಿನ ಜನರಿಗೂ ಲಸಿಕೆಯ ಅಭಿಯಾನವನ್ನು ‍ಪ್ರಾರಂಭಿಸಲಾಯಿತು. ಈ ವೇಳೆ ಕೇಂದ್ರ ಸರ್ಕಾರವು ರಾಜ್ಯ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಉತ್ಪಾದಕರಿಂದಲೇ ನೇರವಾಗಿ ಲಸಿಕೆಯನ್ನು ಖರೀದಿಸಲು ಅನುಮತಿ ನೀಡಿತು. ಹಾಗಾಗಿ ಹೆಚ್ಚಿನ ರಾಜ್ಯಗಳು, ತಮ್ಮ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಣೆ ಮಾಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.