ADVERTISEMENT

ತೆಲುಗು ನಟ, ಶಾಸಕ ಬಾಲಕೃಷ್ಣಗೆ ಅನಾರೋಗ್ಯ: ಸರ್ಕಾರದ ಕಾರ್ಯಕ್ರಮಕ್ಕೆ ಗೈರು

ಏಜೆನ್ಸೀಸ್
Published 11 ಸೆಪ್ಟೆಂಬರ್ 2025, 10:16 IST
Last Updated 11 ಸೆಪ್ಟೆಂಬರ್ 2025, 10:16 IST
ನಂದಮೂರಿ ಬಾಲಕೃಷ್ಣ
ನಂದಮೂರಿ ಬಾಲಕೃಷ್ಣ    

ಹೈದರಾಬಾದ್‌: ತೆಲುಗು ಸ್ಟಾರ್‌ ನಟ ನಂದಮೂರಿ ಬಾಲಕೃಷ್ಣ ಹಾಗೂ ಸಚಿವ ನಾರಾ ಲೋಕೇಶ್ ಅವರು ಸರ್ಕಾರದ 'ಸೂಪರ್ ಸಿಕ್ಸ್... ಸೂಪರ್ ಹಿಟ್' ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. 

ಸ್ಥಳೀಯ ಸಂಸ್ಥೆಗಳ ಜೊತೆಗೆ ಆಂಧ್ರ ಸರ್ಕಾರ ಗುರುವಾರ 'ಸೂಪರ್ ಸಿಕ್ಸ್... ಸೂಪರ್ ಹಿಟ್‘ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಇದರಲ್ಲಿ ಸ್ಥಳೀಯ ಬಡವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ.

ಹಿಂದೂಪುರ ಕ್ಷೇತ್ರದ ಶಾಸಕರಾಗಿರುವ ಬಾಲಕೃಷ್ಣ ಹಾಗೂ ಸಿಎಂ ಪುತ್ರ ಸಚಿವ ನಾರಾ ಲೋಕೇಶ್‌ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರು ಗೈರಾಗಿರುವುದಕ್ಕೆ ಸಚಿವ ಪಯ್ಯವುಲ ಕೇಶವ ಅವರು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ಬಾಲಕೃಷ್ಣ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದಿದ್ದಾರೆ. ಹಾಗೇ ಸಚಿವ ನಾರಾ ಲೋಕೇಶ್‌ ಅವರು ನೇಪಾಳದಲ್ಲಿರುವ ಆಂಧ್ರದ ಜನರನ್ನು ರಾಜ್ಯಕ್ಕೆ ಕರೆತರುವ ಕೆಲಸದಲ್ಲಿ ಬ್ಯುಸಿಯಾಗಿರುವುದರಿಂದ ಅವರೂ ಕೂಡ ಬಂದಿಲ್ಲ ಎಂದು ಪಯ್ಯವುಲ ಕೇಶವ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.