ADVERTISEMENT

PM ಮೋದಿ ವಿದೇಶ ಪ್ರವಾಸ: ವಿವಿಧ ರಾಷ್ಟ್ರಗಳು ನೀಡಿದ ಪ್ರಶಸ್ತಿ, ಉಡುಗೊರೆಗಳು…

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 13:04 IST
Last Updated 29 ಆಗಸ್ಟ್ 2025, 13:04 IST
<div class="paragraphs"><p>ಚಿತ್ರ ಕೃಪೆ:&nbsp;<a href="https://x.com/airnewsalerts">@airnewsalerts</a></p></div>

ಚಿತ್ರ ಕೃಪೆ: @airnewsalerts

   

ಪಿಎಂ ನರೇಂದ್ರ ಮೋದಿ ಅವರು ಇತ್ತಿಚೇಗೆ ವಿದೇಶ ಪ್ರವಾಸಕ್ಕೆ ತೆರಳಿದಾಗ ಅಲ್ಲಿನ ಗೌರವಾನ್ವಿತ ವ್ಯಕ್ತಿಗಳು ಪ್ರೀತಿಯಿಂದ ಬರಮಾಡಿಕೊಂಡು ವಿಶೇಷ ಉಡುಗೊರೆ ಹಾಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.

ಇತ್ತಿಚೀನ ವಿದೇಶ ಪ್ರವಾಸದಲ್ಲಿ ಪಿಎಂ ಮೋದಿಯವರು ಸ್ವೀಕರಿಸಿದ ಉಡುಗೊರೆ ಹಾಗೂ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ.

ADVERTISEMENT

ಮೋದಿ ಅವರು ಬ್ರೆಜಿಲ್‌ಗೆ ಭೇಟಿ ನೀಡಿದಾಗ ಅಲ್ಲಿನ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾರವರು ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್' ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಮೋದಿ ಅವರಿಗೆ ನಮೀಬಿಯಾದಲ್ಲಿ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್‘ ಪ್ರಶಸ್ತಿ ನೀಡಿ ನೀಡಿ ಗೌರವಿಸಲಾಗಿತ್ತು.

ಟ್ರಿನಿಡಾಡ್ ಪ್ರವಾಸದಲ್ಲಿ ಮೋದಿ ಅವರಿಗೆ ‘ದಿ ಆರ್ಡರ್ ಆಫ್ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಅಂಡ್ ಟೊಬಾಗೊ' ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿತ್ತು.

ಸದ್ಯ ಜಪಾನ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಶೋರಿಂಜಾನ್ ದಾರುಮಾ-ಜಿ ದೇವಾಲಯದ ಅರ್ಚಕರು ಉಡುಗೊರೆಯಾಗಿ ದಾರುಮ ಗೊಂಬೆಯನ್ನು ನೀಡಿದ್ದಾರೆ.

ದಾರುಮ ಗೊಂಬೆಯು ಜಪಾನ್‌ನ ಒಂದು ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಸಂಕೇತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.