ADVERTISEMENT

ಗುವಾಹಟಿ: ಬ್ರಹ್ಮಪುತ್ರ ಸೇತುವೆ ಉದ್ಘಾಟಿಸಿದ ನರೇಂದ್ರ ಮೋದಿ

ಪಿಟಿಐ
Published 14 ಫೆಬ್ರುವರಿ 2026, 15:39 IST
Last Updated 14 ಫೆಬ್ರುವರಿ 2026, 15:39 IST
<div class="paragraphs"><p>ಬ್ರಹ್ಮಪುತ್ರ ನದಿಗೆ ನಿರ್ಮಿಸಿರುವ ಆರು ಪಥಗಳ ಕುಮಾರ ಭಾಸ್ಕರ ವರ್ಮ ಸೇತುವೆಯನ್ನು ಶನಿವಾರ ಉದ್ಘಾಟಿಸಲಾಯಿತು&nbsp; </p></div>

ಬ್ರಹ್ಮಪುತ್ರ ನದಿಗೆ ನಿರ್ಮಿಸಿರುವ ಆರು ಪಥಗಳ ಕುಮಾರ ಭಾಸ್ಕರ ವರ್ಮ ಸೇತುವೆಯನ್ನು ಶನಿವಾರ ಉದ್ಘಾಟಿಸಲಾಯಿತು 

   

ಪಿಟಿಐ ಚಿತ್ರ 

ಗುವಾಹಟಿ: ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಬ್ರಹ್ಮಪುತ್ರ ನದಿಗೆ ನಿರ್ಮಿಸಿರುವ 6 ಪಥಗಳ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.

ADVERTISEMENT

‘ಕುಮಾರ ಭಾಸ್ಕರ ವರ್ಮ ಸೇತು’ ಎಂದು ಕರೆಯಲಾಗುವ ಈ ಸೇತುವೆಯನ್ನು ₹3,030 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಇದು ಗುವಾಹಟಿ ಹಾಗೂ ಉತ್ತರ ಗುವಾಹಟಿಯನ್ನು ಸಂಪರ್ಕಿಸುತ್ತದೆ. ಪ್ರಸ್ತುತ, ಸರೈಘಾಟ್‌ ಸೇತುವೆ ಮೂಲಕ ಸಂಪರ್ಕ ಇದ್ದು, ಪ್ರಯಾಣಕ್ಕೆ ಅಂದಾಜು 30 ನಿಮಿಷ ತೆಗೆದುಕೊಳ್ಳುತ್ತದೆ. ನೂತನ ಸೇತುವೆಯಿಂದಾಗಿ ಪ್ರಯಾಣದ ಅವಧಿ 7 ನಿಮಿಷಕ್ಕೆ ಇಳಿಯಲಿದೆ.

ನಂತರ, ಲಾಚಿತ್ ಘಾಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಐಎಂ–ಗುವಾಹಟಿಯ ತಾತ್ಕಾಲಿಕ ಕ್ಯಾಂಪಸ್, ನ್ಯಾಷನಲ್ ಡೇಟಾ ಸೆಂಟರ್ ಅನ್ನು ಮೋದಿ ಅವರು ವರ್ಚುವಲ್‌ ಆಗಿ ಉದ್ಘಾಟಿಸಿದರು.

ಗುವಾಹಟಿ ಸೇರಿ ದೇಶದ ನಾಲ್ಕು ನಗರಗಳಿಗೆ 225 ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಕೂಡ ಇದೇ ವೇಳೆ ಹಸಿರು ನಿಶಾನೆ ತೋರಿದರು. ಗುವಾಹಟಿಗೆ 100 ಬಸ್‌, ನಾಗ್ಪುರ ಹಾಗೂ ಭಾವನಗರಕ್ಕೆ ತಲಾ 50 ಹಾಗೂ ಚಂಡೀಗಢಕ್ಕೆ 25 ಬಸ್‌ಗಳ ಹಂಚಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.