
'ಸೇವಾ ತೀರ್ಥ' ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಉದ್ಘಾಟಿಸಿದರು.
(ಚಿತ್ರ– @narendramodi)
'ಸೇವಾ ತೀರ್ಥ' ಸಂಕೀರ್ಣ
ನೂತನ ಸಂಸತ್ ಭವನ ‘ಸೆಂಟ್ರಲ್ ವಿಸ್ತಾ’ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ, ಪ್ರಜಾ ಕೇಂದ್ರಿತ ಆಡಳಿತವನ್ನೇ ಸೂತ್ರವಾಗಿಟ್ಟುಕೊಂಡು ಈ ಕಾರ್ಯಾಲಯ ನಿರ್ಮಿಸಲಾಗಿದೆ ಎಂದೆನ್ನಲಾಗಿದೆ.
ಸಂಕೀರ್ಣದ ಗೋಡೆಯ ಮೇಲೆ ದೇವನಾಗರಿ ಲಿಪಿಯಲ್ಲಿ ಕೆತ್ತಲಾದ ಹೆಸರು, ಅದರ ಕೆಳಗೆ 'ನಾಗರಿಕ ದೇವೋ ಭವ' ( ನಾಗರಿಕ ದೇವರಿಗೆ ಸಮಾನ) ಎಂಬ ಧ್ಯೇಯವಾಕ್ಯವಿದೆ.
ರೈಸಿನಾ ಹಿಲ್ ಪ್ರದೇಶದ ಸೌತ್ ಬ್ಲಾಕ್‌ನಲ್ಲಿದ್ದ ಪ್ರಧಾನಿ ಕಾರ್ಯಾಲಯ ಇನ್ನು ಮುಂದೆ ಸೇವಾ ತೀರ್ಥಕ್ಕೆ ಸ್ಥಳಾಂತರಗೊಳ್ಳಲಿದೆ.
'ಸೇವಾ ತೀರ್ಥ' ಸಂಕೀರ್ಣದಲ್ಲಿ ಪ್ರಧಾನಿ ಮೋದಿ
ಉದ್ಘಾಟನಾ ಸಮಾರಂಭದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್, ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮತ್ತು ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
ಸೇವಾ ತೀರ್ಥದಲ್ಲಿ ಕಡತಗಳಿಗೆ ಸಹಿ ಹಾಕುತ್ತಿರುವ ಪ್ರಧಾನಿ ಮೋದಿ
'ಸೇವಾ ತೀರ್ಥ' ಸಂಕೀರ್ಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.