ADVERTISEMENT

‘ಅಸ್ಸಾಂ ಚಹಾ ನಾಶಕ್ಕೆ ಕಾಂಗ್ರೆಸ್ ಬೆಂಬಲ’–ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 21:14 IST
Last Updated 20 ಮಾರ್ಚ್ 2021, 21:14 IST
ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಶನಿವಾರ ಗುವಾಹಟಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನಾ ಬೈಕ್ ರ್‍ರ್ಯಾಲಿ ನಡೆಸಿದರು ಪಿಟಿಐ ಚಿತ್ರ
ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಶನಿವಾರ ಗುವಾಹಟಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನಾ ಬೈಕ್ ರ್‍ರ್ಯಾಲಿ ನಡೆಸಿದರು ಪಿಟಿಐ ಚಿತ್ರ   

ಛೌಬಾ (ಅಸ್ಸಾಂ): ‘ಅಸ್ಸಾಂ ಚಹಾಕ್ಕೆ ಜಗತ್ತಿನಾದ್ಯಂತ ಒಳ್ಳೆಯ ಹೆಸರು ಇದೆ. ಆದರೆ ಈ ಚಹಾಕ್ಕೆ ಕೆಟ್ಟ ಹೆಸರು ತರಲು ಹೊರಟಿದ್ದವರನ್ನು ಕಾಂಗ್ರೆಸ್‌ ಬೆಂಬಲಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.

ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು, ‘ನೀವೆಲ್ಲರೂ ಟೂಲ್‌ಕಿಟ್ ಪ್ರಕರಣವನ್ನು ಕೇಳಿರಬಹುದು. ಅಸ್ಸಾಂ ಚಹಾದ ಹೆಸರಿಗೆ ಮಸಿ ಬಳಿಯಲು ಮತ್ತು ಚಹಾ ತೋಟಗಳನ್ನು ನಾಶ ಮಾಡಲು ಆ ದುಷ್ಟರು ಸಂಚು ರೂಪಿಸಿದ್ದರು. ಅಂಥವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಆದರೆ, ಇಲ್ಲಿಗೆ ಬಂದು ಚಹಾ ಕಾರ್ಮಿಕರ ಬಳಿ ಮತ ಕೇಳುತ್ತಿದೆ’ ಎಂದು ಪ್ರಧಾನಿ ಟೀಕಿಸಿದ್ದಾರೆ.

‘ಚಹಾ ತೋಟದ ಕಾರ್ಮಿಕರ ಬವಣೆಗಳನ್ನು ಚಾಯ್‌ವಾಲಾ ಮಾತ್ರ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ’ ಎಂದು ಪ್ರಧಾನಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.