ADVERTISEMENT

ಶಿಮ್ಲಾದಲ್ಲಿ 31ರಂದು ಬಿಜೆಪಿ ಸರ್ಕಾರದ 8ನೇ ವಾರ್ಷಿಕೋತ್ಸವ

ಪಿಟಿಐ
Published 27 ಮೇ 2022, 13:28 IST
Last Updated 27 ಮೇ 2022, 13:28 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಶಿಮ್ಲಾ: ಶಿಮ್ಲಾದಲ್ಲಿ ರೋಡ್‌ಶೋ ಹಮ್ಮಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಿಜೆಪಿ ಸರ್ಕಾರದ ಎಂಟನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ ಎಂದು ಹಿಮಾಚಲ ಪ್ರದೇಶದ ಬಿಜೆಪಿ ಪ್ರಧಾನ ಕಾರ್ಯದರ್ಶಿ ತ್ರಿಲೋಕ್‌ ಜಮ್ವಾಲ್‌ ಹೇಳಿದರು.

ಈ ಕುರಿತು ಮಾಹಿತಿ ನೀಡಿರುವ ಜಮ್ವಾಲ್‌, ‘ಇದೇ 31ರಂದು ಶಿಮ್ಲಾದ ಟೆಲಿಗ್ರಾಫಿಕ್‌ ಕಚೇರಿಯಿಂದ (ಸಿಟಿಒ) ರಾಣಿ ಝಾನ್ಸಿ ಉದ್ಯಾನವನದ‌ವರೆಗೆ ನಡೆಯಲಿರುವ ರೋಡ್‌ಶೋನಲ್ಲಿ ಪ್ರಧಾನಿ ಭಾಗಿಯಾಗಲಿದ್ಧಾರೆ. ನಂತರ ಐತಿಹಾಸಿಕ ರಿಡ್ಜ್‌ ಮೈದಾನದಲ್ಲಿ ನಡೆಯಲಿರುವ ರ‍್ಯಾಲಿಯನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ’ ಎಂದರು.

‘ರೋಡ್‌ಶೋ ಹಾಗೂ ರ‍್ಯಾಲಿ ಬಳಿಕ, ದೇಶದಾದ್ಯಂತ17ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಲಿದ್ದಾರೆ’ ಎಂದು ಜಮ್ವಾಲ್‌ ಹೇಳಿದರು.

ADVERTISEMENT

‍ರ‍್ಯಾಲಿಯ ಸಿದ್ಧತೆಗಳನ್ನು ‍ಪರಿಶೀಲಿಸಿದ ಬಳಿಕ ಜಮ್ವಾಲ್‌ ಅವರು, ‘ನರೇಂದ್ರ ಮೋದಿಯವರು ವಾರ್ಷಿಕೋತ್ಸವ ಆಚರಣೆಗೆ ಶಿಮ್ಲಾವನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.