ADVERTISEMENT

ಐಎನ್‌ಎಸ್ ವಿಕ್ರಾಂತ ಮೇಲೆ ಇಳಿದ ಲಘು ಯುದ್ಧವಿಮಾನ

ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ ಭಾರತೀಯ ನೌಕಾಪಡೆ

ಪಿಟಿಐ
Published 6 ಫೆಬ್ರುವರಿ 2023, 14:30 IST
Last Updated 6 ಫೆಬ್ರುವರಿ 2023, 14:30 IST
ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಲಘು ಯುದ್ಧವಿಮಾನ (ಎಲ್‌ಸಿಎ) ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್ ವಿಕ್ರಾಂತ್‌ ಮೇಲೆ ಇಳಿದ ಐತಿಹಾಸಿಕ ಕ್ಷಣ –ಪಿಟಿಐ ಚಿತ್ರ 
ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಲಘು ಯುದ್ಧವಿಮಾನ (ಎಲ್‌ಸಿಎ) ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್ ವಿಕ್ರಾಂತ್‌ ಮೇಲೆ ಇಳಿದ ಐತಿಹಾಸಿಕ ಕ್ಷಣ –ಪಿಟಿಐ ಚಿತ್ರ    

ನವದೆಹಲಿ: ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನವು (ಎಲ್‌ಸಿಎ-ನೌಕಾಪಡೆ) ಸೋಮವಾರ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್ ವಿಕ್ರಾಂತ್‌ ಮೇಲೆ ಬಂದಿಳಿಯಿತು. ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಭಾರತೀಯ ನೌಕಾಪಡೆಯು ಬಣ್ಣಿಸಿದೆ.

‘ನೌಕಾ ಪೈಲಟ್‌ಗಳು ಐಎನ್‌ಎಸ್ ವಿಕ್ರಾಂತ್ ಹಡಗಿನ ಮೇಲೆ ಎಲ್‌ಸಿಎನಲ್ಲಿ ಬಂದು ಇಳಿಯುತ್ತಿದ್ದಂತೆ ಭಾರತೀಯ ನೌಕಾಪಡೆಯು ಆತ್ಮನಿರ್ಭರ ಭಾರತದ ಕಡೆಗೆ ಐತಿಹಾಸಿಕ ಹೆಜ್ಜೆ ಇರಿಸಿದಂತಾಗಿದೆ’ ಎಂದು ನೌಕಾಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಸ್ವದೇಶಿ ಯುದ್ಧ ವಿಮಾನಗಳೊಂದಿಗೆ ಸ್ವದೇಶಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು, ನಿರ್ಮಿಸಲು ಮತ್ತು ನಿರ್ವಹಿಸುವಲ್ಲಿ ಭಾರತವು ತನ್ನ ಸಾಮರ್ಥ್ಯವನ್ನು ಲ್ಯಾಂಡಿಂಗ್ ಮೂಲಕ ಪ್ರದರ್ಶಿಸಿದೆ’ ಎಂದೂ ಅದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.