ADVERTISEMENT

ಮೇಘಾಲಯ ಗಣಿ ಅವಘಡ: ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 1:29 IST
Last Updated 18 ಜನವರಿ 2019, 1:29 IST
   

ಗುವಾಹಟಿ: ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದ್ದ ಸುರಂಗದಲ್ಲಿ 34 ದಿನಗಳ ಹಿಂದೆ ಸಿಲುಕಿದ್ದ 15 ಕಾರ್ಮಿಕರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ.

ದೂರದಿಂದಲೇ ನಿಯಂತ್ರಿಸಬಹುದಾದ ವಾಹನಗಳನ್ನು (ಆರ್‌ಒವಿ) ಬಳಸಿ ಮೃತದೇಹವನ್ನು ಪತ್ತೆಹಚ್ಚಲಾಗಿದೆ.

‘ಭೂಮಿಯಿಂದ 160 ಅಡಿ ಆಳದಲ್ಲಿದ್ದಮೃತದೇಹವನ್ನು ನೌಕಾಪಡೆ ಸಿಬ್ಬಂದಿ ಹೊರತೆಗೆದಿದ್ದಾರೆ’ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಡಿಸೆಂಬರ್‌ 13ರಂದು ಮೇಘಾಲಯದ ಪೂರ್ವ ಜೈಂತಿಯಾ ಹಿಲ್ಸ್‌ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದ್ದ ಸುರಂಗದಲ್ಲಿ 15 ಕಾರ್ಮಿಕರು ಸಿಲುಕಿದ್ದರು.

ಒಡಿಶಾ ಅಗ್ನಿಶಾಮಕ ದಳ, ಕೋಲ್ ಇಂಡಿಯಾ ಲಿಮಿಟೆಡ್‌, ಕಿರ್ಲೊಸ್ಕರ್‌ ಬ್ರದರ್ಸ್‌, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೈಡ್ರೊಲೊಜಿ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಿವೆ.

ಅವೈಜ್ಞಾನಿಕ ವಿಧಾನಗಳು ಮತ್ತು ಅಸುರಕ್ಷಿತ ಕ್ರಮಗಳನ್ನು ಅನುಸರಿಸಿಗಣಿಗಾರಿಕೆ ನಡೆಯುತ್ತಿದ್ದ ಕಾರಣ, ಎನ್‌ಜಿಟಿ 2014ರಲ್ಲಿಯೇ ನಿಷೇದಿಸಿತ್ತು. ಆದರೂ ಅಕ್ರಮವಾಗಿಗಣಿಗಾರಿಕೆ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.