ADVERTISEMENT

ಕೇರಳದ ಕೊಚ್ಚಿಯಲ್ಲಿ ಗ್ಲೈಡರ್ ಅಪಘಾತ: ನೌಕಾಪಡೆಯ ಇಬ್ಬರು ಸಿಬ್ಬಂದಿ ಸಾವು

ಏಜೆನ್ಸೀಸ್
Published 4 ಅಕ್ಟೋಬರ್ 2020, 7:56 IST
Last Updated 4 ಅಕ್ಟೋಬರ್ 2020, 7:56 IST
ಕೇರಳದ ಕೊಚ್ಚಿಯಲ್ಲಿ ಅಪಘಾತಕ್ಕೀಡಾದ ಗ್ಲೈಡರ್‌
ಕೇರಳದ ಕೊಚ್ಚಿಯಲ್ಲಿ ಅಪಘಾತಕ್ಕೀಡಾದ ಗ್ಲೈಡರ್‌   

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಗ್ಲೈಡರ್ (ಗಾಳಿಯಲ್ಲಿ ಹಾರುವ ಯಂತ್ರ) ಅಪಘಾತಕ್ಕೀಡಾದ ಪರಿಣಾಮ ನೌಕಾಪಡೆಯ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಎಎನ್‌ಐ ಸುದ್ದಿಸಂಸ್ಥೆ, 'ಐಎನ್‌ಎಸ್ ಗರುಡ ನೌಕಾ ನೆಲೆಯ ಹತ್ತಿರ ಇರುವ ತೋಪ್ಪಂಪಡಿ ಸೇತುವೆ ಬಳಿ ಗ್ಲೈಡರ್ ಅಪಘಾತ ಸಂಭವಿಸಿದೆ. ಆ ವೇಳೆ ಲೆಫ್ಟಿನೆಂಟ್ ರಾಜೀವ್ ಝಾ ಮತ್ತು ಅಧಿಕಾರಿ ಸುನಿಲ್ ಕುಮಾರ್ ತರಬೇತಿಯಲ್ಲಿದ್ದರು' ಎಂದು ತಿಳಿಸಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಅಧಿಕಾರಿಗಳು ಕೊನೆಯುಸಿರೆಳೆದಿದ್ದಾರೆ ಎಂದು ನೌಕಾಪಡೆಯ ಮೂಲಗಳು ದೃಢಪಡಿಸಿವೆ. ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.