ADVERTISEMENT

ಭಾರತೀಯರನ್ನು ಕರೆತರಲು ಇರಾನ್ ತಲುಪಿದ ಐಎನ್‌ಎಸ್ ಶಾರ್ದೂಲ್

ಪಿಟಿಐ
Published 8 ಜೂನ್ 2020, 13:36 IST
Last Updated 8 ಜೂನ್ 2020, 13:36 IST
ಭಾರತೀಯ ನೌಕಾಪಡೆಯ ಹಡಗು
ಭಾರತೀಯ ನೌಕಾಪಡೆಯ ಹಡಗು   

ಅಹಮದಾಬಾದ್: ಇರಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಗುಜರಾತ್‌ನ ಪೋರಬಂದರಿಗೆ ಕರೆತರಲು ಭಾರತೀಯ ನೌಕಾಪಡೆಯ ಹಡಗು ಐಎನ್‌ಎಸ್‌ ಶಾರ್ದೂಲ್‌ ಸೋಮವಾರ ಇರಾನ್‌ನ ಅಬ್ಬಾಸ್ ಬಂದರಿಗೆ ತಲುಪಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ವೈರಸ್ ಕಾರಣಕ್ಕಾಗಿ ಪ್ರಯಾಣದ ನಿರ್ಬಂಧಕ್ಕೊಳಗಾಗಿ ಇರಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು, ನೌಕಾಪಡೆಯು ಸೋಮವಾರ ‘ಆಪರೇಷನ್ ಸಮುದ್ರ ಸೇತು’ ಮುಂದಿನ ಹಂತವನ್ನು ಪ್ರಾರಂಭಿಸಿದೆ.

ಬಂದರಿನಲ್ಲಿ ಬೋರ್ಡಿಂಗ್ ಪ್ರಕ್ರಿಯೆಗಳು ಆರಂಭವಾಗಿವೆ. ಐಎನ್‌ಎಸ್ ಶಾರ್ದೂಲ್ ಶೀಘ್ರದಲ್ಲೇ ಭಾರತೀಯರನ್ನು ಗುಜರಾತಿನ ಪೋರಬಂದರಿಗೆ ಕರೆತರಲಿದೆ.

ADVERTISEMENT

‘ಈ ಹಿಂದೆ ನೌಕಾಪಡೆಯ ಜಲಶ್ವ ಮತ್ತು ಮಗರ್ ಹಡಗುಗಳು ಮಾಲ್ಡೀವ್ಸ್‌ ಮತ್ತು ಶ್ರೀಲಂಕಾದಿಂದ 2,874 ಭಾರತೀಯರನ್ನು ಕೊಚ್ಚಿ ಮತ್ತು ಟ್ಯುಟಿಕೋರನ್ ಬಂದರಿಗೆಕರೆತಂದಿದ್ದವು’ ಎಂದು ಗುಜರಾತ್ ರಕ್ಷಣಾ ಪಿಆರ್‌ಒ ಪುನೀತ್ ಚಂದ್ರ ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್ ಸುರಕ್ಷಾ ಮಾರ್ಗಸೂಚಿಗಳ ಪ್ರಕಾರ, ಐಎನ್‌ಎಸ್ ಶಾರ್ದೂಲಾದಲ್ಲಿಬೋರ್ಡಿಂಗ್‌ಗೂ ಮುನ್ನವೇ ಎಲ್ಲರ ಆರೋಗ್ಯ ತಪಾಸಣೆ, ಅಂತರ ಕಾಪಾಡಿಕೊಳ್ಳುವಿಕೆ ಅನುಸರಿಸಲಾಗುವುದು ಎಂದು ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೊ ತಿಳಿಸಿದೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬೇಕಾದ ಜೀವರಕ್ಷಕ ಸಾಧನಗಳು ಸೇರಿದಂತೆ ಪ್ರತ್ಯೇಕ ಐಸೋಲೇಷನ್ ವಿಭಾಗಗಳ ಸೌಲಭ್ಯಗಳನ್ನೂ ಹಡಗಿನಲ್ಲಿ ಒದಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.