ADVERTISEMENT

ಛತ್ತೀಸಗಢ: ಎನ್‌ಕೌಂಟ್‌ರನಲ್ಲಿ ಓರ್ವ ನಕ್ಸಲ್ ಹತ

ಪಿಟಿಐ
Published 3 ಮೇ 2025, 6:47 IST
Last Updated 3 ಮೇ 2025, 6:47 IST
<div class="paragraphs"><p>ನಕ್ಸಲ್</p></div>

ನಕ್ಸಲ್

   

ಗರಿಯಾಬಂದ್ (ಛತ್ತೀಸಗಢ): ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಓರ್ವ ನಕ್ಸಲ್‌ನನ್ನು ಕೊಂದು ಹಾಕಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಜುಹಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಭದ್ರತಾ ಪಡೆಗಳ ತಂಡವೊಂದು ಸ್ಥಳದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದಾಗ ಎನ್‌ಕೌಂಟರ್ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಗುಂಡಿನ ಚಕಮಕಿ ನಡೆದ ಬಳಿಕ, ಸ್ಥಳದಲ್ಲಿ ಓರ್ವ ನಕ್ಸಲ್‌ನ ಮೃತದೇಹ ಪತ್ತೆಯಾಗಿದೆ. ಮದ್ದುಗುಂಡುಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.