ADVERTISEMENT

ನಕ್ಸಲ್‌ ಮುಖಂಡರಾದ ‘ಬಿಜಿಕೆ’, ಸಾವಿತ್ರಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 7:02 IST
Last Updated 10 ನವೆಂಬರ್ 2021, 7:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಕೋಯಿಕ್ಕೋಡ್‌, ಕೇರಳ: ಸಿಪಿಐನ (ಮಾವೊವಾದಿ) ಮುಖಂಡರಾದ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಕೇರಳ– ಕರ್ನಾಟಕ ಗಡಿಭಾಗದಲ್ಲಿ ಕೇರಳದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೃಷ್ಣಮೂರ್ತಿ ಅವರು ಕರ್ನಾಟಕದ ಶೃಂಗೇರಿಯವರು. ನಕ್ಸಲ್‌ ವಲಯದಲ್ಲಿ ಅವರನ್ನು ‘ಬಿಜಿಕೆ’ ಎಂದೇ ಕರೆಯಲಾಗುತ್ತದೆ. ಸಿಪಿಐನ (ಮಾವೊವಾದಿ) ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2005ರಲ್ಲಿ ಸಾಕೇತ್‌ ರಾಜನ್‌ ಹತ್ಯೆ ನಂತರ ಅವರು ಪಕ್ಷದ ನಾಯಕತ್ವ ವಹಿಸಿಕೊಂಡರು. ಸಾವಿತ್ರಿ ಅವರು ಸಂಘಟನೆಯ ‘ಕಬನಿ ದಳಂ’ನ ಕಮಾಂಡರ್‌ ಆಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.