ADVERTISEMENT

ತೆಲಂಗಾಣದಲ್ಲಿ ಮತ್ತೆ 17 ನಕ್ಸಲರ ಶರಣಾಗತಿ

ನಿಷೇಧಿತ ಸಿಪಿಐ ಮಾವೋವಾದಿ ಸಂಘಟನೆಯ 17 ಸದಸ್ಯರು (ನಕ್ಸಲರು) ಇಂದು ತೆಲಂಗಾಣದ ಭದ್ರಾದ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗತರಾಗಿದ್ದಾರೆ.

ಪಿಟಿಐ
Published 30 ಮೇ 2025, 11:19 IST
Last Updated 30 ಮೇ 2025, 11:19 IST
<div class="paragraphs"><p> ಮಾವೋವಾದಿಗಳು (ಸಾಂಕೇತಿಕ ಚಿತ್ರ)</p></div>

ಮಾವೋವಾದಿಗಳು (ಸಾಂಕೇತಿಕ ಚಿತ್ರ)

   

ಹೈದರಾಬಾದ್: ನಿಷೇಧಿತ ಸಿಪಿಐ ಮಾವೋವಾದಿ ಸಂಘಟನೆಯ 17 ಸದಸ್ಯರು (ನಕ್ಸಲರು) ಇಂದು ತೆಲಂಗಾಣದ ಭದ್ರಾದ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗಿದ್ದಾರೆ.

ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ತೆಲಂಗಾಣ ಸರ್ಕಾರ ಕೈಗೊಂಡಿರುವ ‘ಆಪರೇಷನ್ ಚೇಯುತಾ’ ಕಾರ್ಯಕ್ರಮದಡಿ ನಕ್ಸಲರು ಶರಣಾಗತರಾಗಿದ್ದಾರೆ. ಸದ್ಯ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್‌ಪಿ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಇದರೊಂದಿಗೆ ಈ ವರ್ಷ ಛತ್ತೀಸಗಢ, ತೆಲಂಗಾಣ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೊಲೀಸರಿಗೆ ಶರಣಾಗತರಾದ ನಕ್ಸಲರ ಸಂಖ್ಯೆ 282 ಆಗಿದೆ.

ಛತ್ತೀಸಗಢ–ತೆಲಂಗಾಣ ಗಡಿಗಳ ಕಾಡುಗಳಲ್ಲಿ ಹಾಗೂ ಮಾಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್‌ನಲ್ಲಿ ಹೆಚ್ಚು ಸಕ್ರಿಯವಾಗಿರುವ ನಕ್ಸಲರ ನಿಗ್ರಹಕ್ಕೆ ಸಿಆರ್‌ಪಿಎಫ್‌ ಪಡೆಗಳ ಜೊತೆ ಸ್ಥಳೀಯ ಪೊಲೀಸ್ ಪಡೆಗಳು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿವೆ. ಕಾರ್ಯಾಚರಣೆಯಲ್ಲಿ ಹಲವು ನಕ್ಸಲರು ಹತರಾದರೆ, ಅನೇಕರು ಪೊಲೀಸರಿಗೆ ಶರಣಾಗುತ್ತಿದ್ದಾರೆ.

ತೆಲಂಗಾಣದ ಕಾಡುಗಳಲ್ಲಿ ನಕ್ಸಲ್ ಚಲನವಲನದ ಕುರಿತು ಸ್ಥಳೀಯರು ಪೊಲೀಸರಿಗೆ ತಪ್ಪದೇ ಮಾಹಿತಿ ನೀಡಬೇಕು ಎಂದು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಇದರಿಂದ ಅಲ್ಲಿ ನಕ್ಸಲರಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಶರಣಾಗತರ ಸಂಖ್ಯೆಯೂ ಹೆಚ್ಚುತ್ತಿದೆ.

ಇತ್ತೀಚೆಗೆ ತೆಲಂಗಾಣದಲ್ಲಿ ಸ್ಥಳೀಯರು ನೀಡಿದ ಮಾಹಿತಿಯಿಂದಲೇ ಮುಲುಗು ಜಿಲ್ಲೆಯಲ್ಲಿ 21 ನಕ್ಸಲರನ್ನು ಬಂಧಿಸಲು ಸಾಧ್ಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕೇಂದ್ರ ಗೃಹ ಇಲಾಖೆ 2026 ಮಾರ್ಚ್ ಒಳಗೆ ದೇಶವನ್ನು ನಕ್ಸಲ್ ಮುಕ್ತ ಮಾಡಲಾಗುವುದು ಎಂದು ಶಪಥ ತೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.