ನಕ್ಸಲರು
ಮುಂಬೈ; ‘ಇತ್ತೀಚೆಗೆ ನಕ್ಸಲರ ಪ್ರಮುಖ ನಾಯಕ ಮಲ್ಲೊಜುಲ ವೇಣುಗೋಪಾಲ್ ರಾವ್ ಅಲಿಯಾಸ್ ಭೂಪತಿ ಅವರ ಶರಣಾಗತಿಯು, ನಕ್ಸಲ್ ಚಳವಳಿಯಲ್ಲಿ ಬಿರುಕು ಹೆಚ್ಚಿರುವುದನ್ನು ತೋರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ನಕ್ಸಲರ ಶರಣಾಗತಿ ಇನ್ನಷ್ಟು ಹೆಚ್ಚಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯಲ್ಲಿ ಭೂಪತಿ ಅಥವಾ ಸೋನು ಶರಣಾಗಿದ್ದರು. ‘ನಕ್ಸಲ್ ಚಳವಳಿಯಲ್ಲಿ ಗಂಭೀರವಾದ ಸೈದ್ಧಾಂತಿಕ ಭಿನ್ನಭಿಪ್ರಾಯಗಳು ಕಂಡು ಬರುತ್ತಿವೆ’ ಎಂದು ಅವರು ಶರಣಾಗತಿ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹೇಳಿದ್ದರು. ಭೂಪತಿ ಶರಣಾಗತಿಯನ್ನು ನಕ್ಸಲ್ ಚಳವಳಿಯನ್ನು ಅಂತ್ಯಗೊಳಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ಸಾಧಿಸಿದ ಮೈಲಿಗಲ್ಲು ಎಂದೇ ವಿಶ್ಲೇಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.