ADVERTISEMENT

ಡ್ರಗ್ಸ್‌ ಪ್ರಕರಣ: ಎನ್‌ಸಿಬಿ ಅಧಿಕಾರಿಗಳ ಮೇಲೆ ಹಲ್ಲೆ; ಮೂವರ ಬಂಧನ

ಪಿಟಿಐ
Published 23 ನವೆಂಬರ್ 2020, 10:57 IST
Last Updated 23 ನವೆಂಬರ್ 2020, 10:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಗೋರೆಗಾವ್‌ನಲ್ಲಿ 50 ಜನರಿದ್ದ ಗುಂಪೊಂದು ಎನ್‌ಸಿಬಿ ಅಧಿಕಾರಿಗಳು, ಸಿಬ್ಬಂದಿತಂಡದ ಮೇಲೆ ಹಲ್ಲೆ ನಡೆಸಿದೆ . ಇದರಲ್ಲಿ ಇಬ್ಬರು ಅಧಿಕಾರಿಗಳಿಗೆ ಗಾಯಗಳಾಗಿವೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿಶ್ವ ವಿಜಯ್ ಸಿಂಗ್ ಒಳಗೊಂಡ ಐವರು ಸದಸ್ಯರ ತಂಡವು ಭಾನುವಾರ ಡ್ರಗ್ಸ್‌ ಪೆಡ್ಲರ್‌ಗಳಿದ್ದ ಸ್ಥಳಕ್ಕೆ ದಾಳಿ ನಡೆಸಲು ತೆರಳಿತ್ತು. ಆಗ ಹಲ್ಲೆ ನಡೆದಿದ್ದು, ಘಟನೆ ಸಂಬಂಧ ಮೂವರನ್ನು ಬಂಧಿಲಾಗಿದೆ ಎಂದು ಅವರು ತಿಳಿಸಿದರು.

ಗೋರೆಗಾವ್‌ನ ಭಗತ್‌ ಸಿಂಗ್‌ ನಗರ ತಲುಪಿದ ತಂಡವನ್ನು ಮಹಿಳೆಯರು ಸೇರಿ 50 ಜನರ ಗುಂಪು ಸುತ್ತುವರಿದು, ಬಳಿಕ ಹಲ್ಲೆ ನಡೆಸಿದೆ. ಗುಂಪಿನಲ್ಲಿದ್ದ ಕೆಲವರು ಅಧಿಕಾರಿಗಳನ್ನು ಅಪಹರಣಕಾರರು ಎಂದು ಹೇಳಿ ದಾಳಿಗೆ ಪ್ರಚೋದನೆ ನೀಡಿದ್ದಾರೆ. ಕಲ್ಲುಗಳಿಂದಲೂ ಹಲ್ಲೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರುತಕ್ಷಣವೇ ಸ್ಥಳೀಯ ‍ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಅಧಿಕಾರಿಗಳಿಗೆ ಗಾಯಾಗಳಾಗಿವೆ. ಯೂಸುಫ್ ಶೇಖ್, ಇವರ ತಂದೆ ಅಮಿನ್ ಶೇಖ್ ಮತ್ತು ವಿಪುಲ್ ಅಗ್ರೆ ಎಂಬವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.