ADVERTISEMENT

ನಿಶ್ಯಕ್ತಿ; ಮಹಾರಾಷ್ಟ್ರ ಮಾಜಿ ಸಚಿವ ಅನಿಲ್‌ ದೇಶ್‌ಮುಖ್‌ ಆಸ್ಪತ್ರೆಗೆ ದಾಖಲು

ಪಿಟಿಐ
Published 26 ಆಗಸ್ಟ್ 2022, 14:05 IST
Last Updated 26 ಆಗಸ್ಟ್ 2022, 14:05 IST
ಅನಿಲ್‌ ದೇಶ್‌ಮುಖ್‌
ಅನಿಲ್‌ ದೇಶ್‌ಮುಖ್‌   

ಮುಂಬೈ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್‌ ಅವರು ಜೈಲಿನಲ್ಲಿ ನಿಶ್ಯಕ್ತಿಯಿಂದ ಬಳಲುತಿದ್ದ ಕಾರಣ ಅವರನ್ನು ಇಲ್ಲಿನ ಜೆ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ದೇಶ್‌ಮುಖ್‌ ಅವರು ತಲೆಸುತ್ತು, ನಿಶ್ಯಕ್ತಿ ಮತ್ತುಎದೆನೋವಿನಿಂದ ಬಳಲುತ್ತಿದ್ದರು. ಅವರ ರಕ್ತದೊತ್ತಡದಲ್ಲಿ ಅಲ್ಪ ಏರಿಕೆಯಾಗಿದೆ. ಹೀಗಾಗಿ ಅವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ 2021ರ ನವೆಂಬರ್‌ನಲ್ಲಿ ಮೊದಲಿಗೆ ಜಾರಿ ನಿರ್ದೇಶನಾಲಯ, ನಂತರ ಕೇಂದ್ರೀಯ ತನಿಖಾ ದಳ (ಸಿಬಿಐ) ದೇಶ್‌ಮುಖ್‌ ಅವರನ್ನು ಬಂಧಿಸಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.