ADVERTISEMENT

'ರಾಮ ಮಾಂಸಾಹಾರಿ' ಹೇಳಿಕೆ: ಟೀಕೆ ಬಳಿಕ ವಿಷಾದ ವ್ಯಕ್ತಪಡಿಸಿದ ಎನ್‌ಸಿಪಿ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2024, 10:07 IST
Last Updated 4 ಜನವರಿ 2024, 10:07 IST
<div class="paragraphs"><p>ಜಿತೇಂದ್ರ ಅವ್ಹಾದ್‌</p></div>

ಜಿತೇಂದ್ರ ಅವ್ಹಾದ್‌

   

ಚಿತ್ರಕೃಪೆ: X/@Awhadspeaks

ಬೆಂಗಳೂರು: 'ರಾಮ ಮಾಂಸಾಹಾರಿ' ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್‌ ಅವರು ತಮ್ಮ ಹೇಳಿಕೆಗೆ ವಿಷಾದಿಸಿದ್ದಾರೆ.

ADVERTISEMENT

ಎನ್‌ಸಿಪಿಯ ಶರದ್‌ ಪವಾರ್‌ ಬಣದಲ್ಲಿ ಗುರುತಿಸಿಕೊಂಡಿರುವ ಜಿತೇಂದ್ರ ಅವರು, ರಾಮ ಮಾಂಸಾಹಾರಿ ಎನ್ನುವ ವಿಚಾರದ ಕುರಿತು ಭಾವನಾತ್ಮಕವಾಗಿ ಮತ್ತು ವಿಷಯಾಧಾರಿತವಾಗಿ – ಎರಡು ರೀತಿಯಲ್ಲಿ ಚರ್ಚಿಸಲಾಗುತ್ತದೆ. ಆದರೆ, ಜನವರಿ 22ರ ವರೆಗೆ ಯಾರೊಬ್ಬರೂ ತಾರ್ಕಿಕವಾಗಿ ಮಾತನಾಡುವುದಿಲ್ಲ. ಹಾಗಾಗಿ ನನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಯಾರೊಬ್ಬರ ಭಾವನೆಗಳಿಗೆ ನೋವು ಮಾಡುವ ಉದ್ದೇಶ ನನ್ನದಲ್ಲ ಎಂದು ಹೇಳಿದ್ದಾರೆ.

ಆದಾಗ್ಯೂ ಅವರು, ವಾಲ್ಮೀಕಿ ಬರೆದಿರುವ ರಾಮಾಯಣದಲ್ಲೇ 'ರಾಮ ಮಾಂಸಾಹಾರಿ' ಎಂದು ಉಲ್ಲೇಖಿಸಲಾಗಿದೆ ಎನ್ನುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಅವ್ಹಾದ್‌ ಅವರು 'ರಾಮ ಕ್ಷತ್ರಿಯ ಮತ್ತು ಮಾಂಸ ತಿನ್ನುತ್ತಿದ್ದ' ಎಂದು ಹೇಳಿದ್ದ ವಿಡಿಯೊವನ್ನು ಬಿಜೆಪಿ ಹರಿಯಾಣ ಘಟಕದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅರುಣ್‌ ಯಾದವ್‌ ಹಂಚಿಕೊಂಡಿದ್ದಾರೆ. ಅದಾದ ಬಳಿಕ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತು.

ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮ ಮಂದಿರದಲ್ಲಿ ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನಾಂಕ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.