ADVERTISEMENT

ಯೂಟರ್ನ್‌ ಊಹಾಪೋಹಗಳಿಗೆ ತೆರೆ: ಬಿಹಾರದಲ್ಲಿ ಎನ್‌ಡಿಎ ಒಗ್ಗಟ್ಟಾಗಿದೆ ಎಂದ ನಿತೀಶ್‌

ಪಿಟಿಐ
Published 2 ಮಾರ್ಚ್ 2020, 2:01 IST
Last Updated 2 ಮಾರ್ಚ್ 2020, 2:01 IST
ನಿತೀಶ್‌ ಕುಮಾರ್‌
ನಿತೀಶ್‌ ಕುಮಾರ್‌   

ಪಟ್ನಾ: ‘ಬಿಹಾರದಲ್ಲಿ ಎನ್‌ಡಿಎ ಮೈತ್ರಿಯು ಭದ್ರವಾಗಿದೆ’ ಎಂದು ಜೆಡಿಯು ಮುಖ್ಯಸ್ಥ, ಮುಖ್ಯಮಂತ್ರಿ ನಿತೀಶ್‌ ಕುಮಾರ್ ಹೇಳಿದ್ದಾರೆ.

ಆರ್‌ಜೆಡಿ, ಕಾಂಗ್ರೆಸ್‌ ಜೊತೆ ಸೇರಿಮಹಾ ಘಟಬಂಧನ್‌ ರಚಿಸಿ ಬಿಹಾರದಲ್ಲಿಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದ ನಿತೀಶ್‌,ನಂತರ ಘಟಬಂಧನ ಮುರಿದು ಬಿಜೆಪಿ ಸಖ್ಯ ಬೆಳೆಸಿ ಮುಖ್ಯಮಂತ್ರಿಗಿ ಮುಂದುವರಿದಿದ್ದರು. ಇತ್ತೀಚೆಗೆ ಅವರು ಲಾಲುಪ್ರಸಾದ್‌ ಅವರ ಪುತ್ರ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಅವರನ್ನು ಭೇಟಿಮಾಡಿದ್ದರು. ಇದಾದ ನಂತರ ಎನ್‌ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಬರಲಿದೆ ಎಂದು ದೊಡ್ಡಮಟ್ಟದಲ್ಲಿಸುದ್ದಿಯಾಗಿತ್ತು.

ಹೀಗಿರುವಾಗಲೇ, ಪಾಟ್ನಾದಲ್ಲಿ ಭಾನುವಾ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದನ್ನು ಕಾರ್ಯಕರ್ತರು ಖಚಿತಪಡಿಸಬೇಕು’ ಎಂದರು.

ADVERTISEMENT

ಸಿಎಎ ವಿಚಾರವನ್ನು ಪ್ರಸ್ತಾಪಿಸುತ್ತಾ, ‘ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಅನ್ನು ವಿರೋಧಿಸಿ ಈಗಾಗಲೇ ಬಿಹಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಸಿಎಎ ವಿಚಾರ ನ್ಯಾಯಾಲಯದಲ್ಲಿದೆ. ಆದ್ದರಿಂದ ಇನ್ನೂ ಸ್ವಲ್ಪ ಕಾಲ ತಾಳ್ಮೆಯಿಂದ ಕಾಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.