ADVERTISEMENT

ದೆಹಲಿ: ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ 98 ಮೆಟ್ರೊ ಪ್ರಯಾಣಿಕರಿಗೆ ದಂಡ

ಪಿಟಿಐ
Published 18 ಅಕ್ಟೋಬರ್ 2020, 6:02 IST
Last Updated 18 ಅಕ್ಟೋಬರ್ 2020, 6:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈವರೆಗೆ ಕೋವಿಡ್‌–19 ಮಾರ್ಗಸೂಚಿಯನ್ನು ಪಾಲಿಸದ 98 ಮೆಟ್ರೊ ಪ್ರಯಾಣಿಕರಿಗೆ ದೆಹಲಿ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಮೆಟ್ರೊ ಪ್ರಯಾಣದ ವೇಳೆ ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸದಿದ್ದವರನ್ನು ಪತ್ತೆ ಹಚ್ಚಲುದೆಹಲಿ ಪೊಲೀಸರು ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದರು. ಈ ಅಭಿಯಾನದಡಿ ಮುಖಗವಸು ಧರಿಸದ ಮತ್ತು ಅಂತರ ಕಾಯ್ದುಕೊಳ್ಳದ ಪ್ರಯಾಣಿಕರಿಗೆ ಚಾಲನ್‌ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

‘ಕಳೆದ ನಾಲ್ಕು ದಿನಗಳಲ್ಲಿ 1,903 ಮೆಟ್ರೊ ರೈಲುಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಈವರೆಗೆ 98 ಮಂದಿಗೆ ದಂಡ ವಿಧಿಸಲಾಗಿದೆ’ ಎಂದು ದೆಹಲಿಯ (ಮೆಟ್ರೊ) ಉಪ ಆಯುಕ್ತ ಜಿತೇಂದ್ರ ಮಣಿ ಅವರು ತಿಳಿಸಿದರು.

ADVERTISEMENT

‘ಮೆಟ್ರೊ ಪ್ರಯಾಣಿಕರೆಲ್ಲರೂ ಮುಖಗವಸನ್ನು ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಆಗಾಗ ಕೈಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಬೇಕು’ ಎಂದು ಅವರು ಮನವಿ ಮಾಡಿದರು.

ಕೊರೊನಾ ಸೋಂಕಿನಿಂದಾಗಿ ಮಾ.22 ರಂದು ಸ್ಥಗಿತಗೊಂಡಿದ್ದ ದೆಹಲಿ ಮೆಟ್ರೊ ಸಂಚಾರ 169 ದಿನಗಳ ಬಳಿಕ ಸೆಪ್ಟೆಂಬರ್‌ನಲ್ಲಿ ಪುನರಾರಂಭಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.