ADVERTISEMENT

ವೈಭವೀಕರಿಸುವ ರಾಜಕೀಯವಲ್ಲ, ವಾಸ್ತವ ಜೀವನಕ್ಕೆ ಹತ್ತಿರವಿರುವ ರಾಜಕೀಯ ಬೇಕು:ರಾಹುಲ್

ಪಿಟಿಐ
Published 5 ಜೂನ್ 2025, 10:25 IST
Last Updated 5 ಜೂನ್ 2025, 10:25 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ನವದೆಹಲಿ: ದ್ವಿಚಕ್ರ ವಾಹನಗಳು, ಕಾರುಗಳ ಮಾರಾಟದಲ್ಲಿ ಕುಸಿತ ಹಾಗೂ ಮೊಬೈಲ್ ಮಾರುಕಟ್ಟೆಯಲ್ಲಿನ ಕುಸಿತವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಘಟನೆಗಳನ್ನು ವೈಭವೀಕರಿಸುವ ರಾಜಕೀಯದ ಬದಲು, ಜನರ ವಾಸ್ತವ ಜೀವನಕ್ಕೆ ಹತ್ತಿರವಿರುವ ರಾಜಕಾರಣ ದೇಶಕ್ಕೆ ಅಗತ್ಯ ಇದೆ ಎಂದು ಅವರು ಕೇಂದ್ರ ಸರ್ಕಾರವನ್ನು ಮಾರ್ಮಿಕವಾಗಿ ಟೀಕಿಸಿದರು.

ಈ ಕುರಿತು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದರು.

ADVERTISEMENT

‘ಆಯ್ದ ಕೆಲವು ಬಂಡವಾಳಶಾಹಿಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯರಿಗೂ ಕೆಲಸ ಮಾಡುವ ಆರ್ಥಿಕತೆ ಬೇಕು’ ಎಂದು ಪ್ರತಿಪಾದಿಸಿದರು.

‘ಅಂಕಿ ಅಂಶಗಳು ಸತ್ಯವನ್ನು ಹೇಳುತ್ತಿವೆ. ಕಳೆದ ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.17ರಷ್ಟು, ಕಾರುಗಳ ಮಾರಾಟದಲ್ಲಿ ಶೇ 8.6ರಷ್ಟು ಕುಸಿತವಾಗಿದೆ. ಮೊಬೈಲ್‌ ಮಾರುಕಟ್ಟೆ ಶೇ 7ರಷ್ಟು ಕುಸಿದಿದೆ. ಮತ್ತೊಂದೆಡೆ, ವೆಚ್ಚ ಮತ್ತು ಸಾಲ ಎರಡೂ ನಿರಂತರವಾಗಿ ಹೆಚ್ಚುತ್ತಿವೆ. ಮನೆ ಬಾಡಿಗೆ, ಶೈಕ್ಷಣಿಕ ವೆಚ್ಚ ಬಹುತೇಕ ಎಲ್ಲವೂ ದುಬಾರಿಯಾಗಿವೆ’ ಎಂದರು.

ಇವು ಕೇವಲ ಅಂಕಿಅಂಶಗಳಲ್ಲ, ಪ್ರತಿಯೊಬ್ಬ ಭಾರತೀಯನು ಅನುಭವಿಸುತ್ತಿರುವ ಆರ್ಥಿಕ ಒತ್ತಡದ ವಾಸ್ತವಿಕತೆ ಎಂದು ಹೇಳಿದರು.

‘ನಮಗೆ ಬೇಕಿರುವುದು ಘಟನೆಗಳನ್ನು ವೈಭವೀಕರಿಸುವ ರಾಜಕೀಯವಲ್ಲ, ಪ್ರಶ್ನೆಗಳನ್ನು ಕೇಳುವ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸುವ ರಾಜಕಾರಣ ಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.