ADVERTISEMENT

ನೀಟ್ ಪರೀಕ್ಷೆ ಸರಿ ಉತ್ತರದಲ್ಲಿ ಲೋಪ: ವಿಚಾರಣೆಗೆ ಕೋರ್ಟ್ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 16:34 IST
Last Updated 13 ಜೂನ್ 2019, 16:34 IST

ನವದೆಹಲಿ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಮೇ 5ರಂದು ನಡೆಸಿದ ನೀಟ್ ಪರೀಕ್ಷೆಯಲ್ಲಿ ನಾಲ್ಕು ಪ್ರಶ್ನೆಗಳು ತಪ್ಪಾಗಿದ್ದವು ಎಂದು ವಿದ್ಯಾರ್ಥಿಗಳ ತಂಡ ಆರೋಪಿಸಿದೆ.

ಹೈದರಾಬಾದ್ ಮೂಲಕ ಕಾಯತಿ ರೋಹನ್ ರೆಡ್ಡಿ ಹಾಗೂ ಇತರ ಮೂವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಮರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಅಜಯ್ ರಸ್ತೋಗಿ ಅವರ ಪೀಠ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದೆ.

ಜೂನ್ 5ರಂದು ಪ್ರಕಟಿಸಿರುವ ಅಂತಿಮ ಸರಿ ಉತ್ತರಗಳಲ್ಲಿ ದೋಷಗಳಿದ್ದು, ಸರಿಪಡಿಸಿ ಮತ್ತೊಮ್ಮೆ ಸರಿ ಉತ್ತರಗಳನ್ನು ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರಕ್ಕೆ (ಎನ್‌ಟಿಎ) ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.