ADVERTISEMENT

KIITಯಲ್ಲಿ ಆತ್ಮಹತ್ಯೆ: 11 ತಿಂಗಳ ಹಿಂದೆ ಕಿರುಕುಳದ ದೂರು ನೀಡಿದ್ದ ವಿದ್ಯಾರ್ಥಿನಿ

ಪಿಟಿಐ
Published 21 ಮಾರ್ಚ್ 2025, 12:52 IST
Last Updated 21 ಮಾರ್ಚ್ 2025, 12:52 IST
<div class="paragraphs"><p>ಆತ್ಮಹತ್ಯೆ ಮಾಡಿಕೊಂಡ ನೇಪಾಳದ ವಿದ್ಯಾರ್ಥಿನಿ&nbsp;ಪ್ರಕೃತಿ ಲಾಮ್ಸಾಲ್</p></div>

ಆತ್ಮಹತ್ಯೆ ಮಾಡಿಕೊಂಡ ನೇಪಾಳದ ವಿದ್ಯಾರ್ಥಿನಿ ಪ್ರಕೃತಿ ಲಾಮ್ಸಾಲ್

   

ಭುವನೇಶ್ವರ: ಕಳೆದ ತಿಂಗಳು (ಫೆಬ್ರುವರಿ) ಒಡಿಶಾದ ಭುವನೇಶ್ವರದಲ್ಲಿನ ಕಳಿಂಗಾ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಯಲ್ಲಿ (ಕೆಐಐಟಿ) ಆತ್ಮಹತ್ಯೆ ಮಾಡಿಕೊಂಡ ನೇಪಾಳದ ವಿದ್ಯಾರ್ಥಿನಿ, ಕಳೆದ ವರ್ಷ ಮಾರ್ಚ್‌ನಲ್ಲಿ ವಿಶ್ವವಿದ್ಯಾಲಯ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳದ ದೂರು ನೀಡಿದ್ದಳು ಎಂದು ಉನ್ನತ ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್‌ ಇಂದು (ಶುಕ್ರವಾರ) ವಿಧಾನಸಭೆಗೆ ತಿಳಿಸಿದ್ದಾರೆ.

ಕಾಂಗ್ರೆಸ್‌ ಶಾಸಕ ದಸರಥಿ ಗೋಮಂಗ ಅವರ ಪ್ರಶ್ನೆಗೆ ಉತ್ತರಿಸಿದ ಸೂರಜ್‌, ‘ಆತ್ಮಹತ್ಯೆ ಮಾಡಿಕೊಂಡ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ತನ್ನ ಸಾವಿನ 11 ತಿಂಗಳ ಮೊದಲು 2024ರ ಮಾರ್ಚ್‌ 12ರಂದು ಕೆಐಐಟಿ ಅಧಿಕಾರಿಗಳ ಮುಂದೆ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದಳು’ ಎಂದು ಹೇಳಿದ್ದಾರೆ .

ADVERTISEMENT

ಫೆಬ್ರುವರಿ 16ರಂದು ಕೆಐಐಟಿಯಲ್ಲಿ ಮೂರನೇ ವರ್ಷದಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ನೇಪಾಳಿ ವಿದ್ಯಾರ್ಥಿನಿ ಪ್ರಕೃತಿ ಲಾಮ್ಸಾಲ್, ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಲೈಂಗಿಕ ಕಿರುಕುಳದ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.