ADVERTISEMENT

ನೇತಾಜಿ ಇತಿಹಾಸ ತಿರುಚುವಿಕೆ ತಡೆಯಲು ಪಿಐಎಲ್

ಪಿಟಿಐ
Published 20 ನವೆಂಬರ್ 2022, 11:18 IST
Last Updated 20 ನವೆಂಬರ್ 2022, 11:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತಾ: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜೀವನ ಮತ್ತು ಸಾಧನೆಗಳನ್ನು ಸಿನಿಮಾಗಳಲ್ಲಿ ಮತ್ತು ವಿವಿಧ ಮಾಧ್ಯಮಗಳಲ್ಲಿ ತಿರುಚಲಾಗುತ್ತಿದೆ ಎಂದು ಆರೋಪಿಸಿರುವ ನೇತಾಜಿ ಸಂಬಂಧಿಕರು, ಅಂತಹ ಚಟುವಟಿಕೆಗಳನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ.

ನೇತಾಜಿ ಅವರ ಸಂಬಂಧಿಗಳಾದ ಸೌಮ್ಯ ಶಂಕರ್‌ ಬೋಸ್‌ ಮತ್ತು ಚಂದ್ರ ಕುಮಾರ್‌ ಬೋಸ್‌ ಈ ಪಿಐಎಲ್‌ ಸಲ್ಲಿಸಿದ್ದು, ‘ಭಾರತ ಸ್ವಾತಂತ್ರ್ಯ ಹೋರಾಟ ಹಾಗೂ ರಾಷ್ಟ್ರ ನಾಯಕರ ಕುರಿತು ಸಿನಿಮಾ ಹಾಗೂ ಸಮೂಹ ಮಾಧ್ಯಮಗಳ ಮುಖಾಂತರಯಾವುದೇ ತಪ್ಪು ಮಾಹಿತಿಗಳನ್ನು ಹರಡದಂತೆ ತಡೆಯಬೇಕು’ ಎಂದು ಕೋರಿದ್ದಾರೆ.

‘ಭಾರತ ಸರ್ಕಾರವು ನೇತಾಜಿ ಅವರ ಕುರಿತು ಈಗಾಗಲೇ ಹಲವು ಆಯೋಗಗಳ ಮೂಲಕ ತನಿಖೆ ನಡೆಸಿದೆ. ಈ ಆಯೋಗಗಳ ವರದಿಗಳನ್ನು ಸಂಸತ್ತಿನಲ್ಲಿ ಮಂಡಿಸಿ, ಒಪ್ಪಿಕೊಳ್ಳಲಾಗಿದೆ. ಆದರೆ ಕೆಲವರು ಖಾಸಗಿ ಲಾಭಕ್ಕಾಗಿ ಚಲನಚಿತ್ರ ಹಾಗೂ ಸಮೂಹ ಮಾಧ್ಯಮಗಳ ಮೂಲಕ ಪರಿಶೀಲನೆಗೊಳಪಡದ ಸಿದ್ದಾಂತಗಳನ್ನು ಹರಡುತ್ತಿದ್ದಾರೆ’ ಎಂದೂ ಅವರು ಆರೋಪಿಸಿದ್ದಾರೆ.

ADVERTISEMENT

‘ಮುಂದಿನವಾರ ಈ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ’ ಎಂದು ಅರ್ಜಿದಾರರ ಪರ ವಕೀಲರಾದ ಸಾತ್ವಿಕ್‌ ಮಜುಂದಾರ್‌ ಭಾನುವಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.