ಐಜ್ವಾಲ್: ತಳಮಟ್ಟದಲ್ಲಿ ಕೆಲಸ ಮಾಡಿ ಪಕ್ಷದಲ್ಲಿ ಸುಧಾರಣೆ ತರುವುದಾಗಿ ನೂತನವಾಗಿ ಆಯ್ಕೆಯಾದ ಮಿಜೊರಾಂ ಬಿಜೆಪಿ ಮುಖ್ಯಸ್ಥ ಕೆ. ಬೀಚ್ಚುವಾ ಬುಧವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಕ್ಷವನ್ನು ಸುಧಾರಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಘಟಕಗಳನ್ನು ರಚಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇಲ್ಲಿ ಬಿಜೆಪಿಯನ್ನು ಬಲಪಡಿಸಲು ನಾವು ತಳಮಟ್ಟದಲ್ಲಿ ಸುಧಾರಣೆಗಳನ್ನು ತರುತ್ತೇವೆ. ಹಾಗೂ ಗ್ರಾಮಗಳಲ್ಲಿ ಸಾಧ್ಯವಾದಷ್ಟು ಘಟಕಗಳನ್ನು ಸ್ಥಾಪಿಸುತ್ತೇವೆ ಎಂದು ಬೀಚ್ಚುವಾ ಹೇಳಿದರು.
ರಾಜ್ಯದಲ್ಲಿ ಪಕ್ಷವು ಪ್ರಸ್ತುತ 75 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಹಾಗೂ 327 ಘಟಕಗಳನ್ನು ಹೊಂದಿದೆ ಎಂದು ಅವರು ಹೇಳಿದರು.
ಬೀಚ್ಚುವಾ ಅವರ ಸದ್ಯ ಸಿಯಾದ ಶಾಸಕರಾಗಿದ್ದಾರೆ. ಅವರು ಮೂರು ಸಲ ಶಾಸಕರು ಹಾಗೂ ಒಂದು ಬಾರಿ ಸಚಿವರಾಗಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರು ಬೀಚ್ಚುವಾ ಅವರನ್ನು ಮಿಜೊರಾಂ ಅಧ್ಯಕ್ಷರು ಎಂದು ಘೋಷಣೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.