ADVERTISEMENT

ಹೊಸ ತೆರಿಗೆ ವ್ಯವಸ್ಥೆಯಿಂದ ಉಳಿತಾಯದ ಮೇಲೆ ವ್ಯತಿರಿಕ್ತ ಪರಿಣಾಮ: ಎಸ್‌ಜೆಎಂ 

ಪಿಟಿಐ
Published 3 ಫೆಬ್ರುವರಿ 2023, 12:39 IST
Last Updated 3 ಫೆಬ್ರುವರಿ 2023, 12:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೊಸ ಆದಾಯ ತೆರಿಗೆ ವ್ಯವಸ್ಥೆಯು ಉಳಿತಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಸ್ವದೇಶಿ ಜಾಗರಣ ಮಂಚ್ (ಎಸ್‌ಜೆಎಂ) ಶುಕ್ರವಾರ ಹೇಳಿದೆ.

ಮಧ್ಯಮ ವರ್ಗದ ಉಳಿತಾಯ ಉತ್ತೇಜಿಸಲು ಹೊಸ ತೆರಿಗೆ ವ್ಯವಸ್ಥೆ ಬದಲಾಯಿಸುವಂತೆ ಎಸ್‌ಜೆಎಂ ಕೇಂದ್ರವನ್ನು ಒತ್ತಾಯಿಸಿದೆ.

‘ನಿರೀಕ್ಷೆಯಂತೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಮಧ್ಯಮ ವರ್ಗ ಮತ್ತು ಅತಿ ಶ್ರೀಮಂತರಿಗೆ ಆದಾಯ ತೆರಿಗೆ ಹೊರೆ ಕಡಿಮೆ ಮಾಡಲಾಗಿದೆ. ಇದು ಒಟ್ಟು ₹37,000 ಕೋಟಿ ಗಳ ಆದಾಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಎಸ್‌ಜೆಎಂ ಸಹ ಸಂಚಾಲಕ ಅಶ್ವನಿ ಮಹಾಜನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಹೊಸ ಆದಾಯ ತೆರಿಗೆ ವ್ಯವಸ್ಥೆಯು ತೆರಿಗೆದಾರರಿಗೆ ಕಡಿಮೆ ತೆರಿಗೆ ಹೊರೆಯೊಂದಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ಸುಲಭದ ದೃಷ್ಟಿಯಿಂದ ಪರಿಹಾರ ನೀಡಬಹುದು. ಆದರೆ, ಇದು ಆದಾಯ ತೆರಿಗೆ ಪಾವತಿದಾರರು ಮಾಡುವ ಉಳಿತಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.