ADVERTISEMENT

ಪತಿಯ ಹೊಡೆತವೇ ಲೇಸು ಎಂದ ಪತ್ನಿಯರು! ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ

ಪಿಟಿಐ
Published 28 ನವೆಂಬರ್ 2021, 12:59 IST
Last Updated 28 ನವೆಂಬರ್ 2021, 12:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಈ ವರ್ಷದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ (ಎನ್‌ಎಫ್‌ಎಚ್‌ಎಸ್–5) ಕುತೂಹಲಕರ ಮಾಹಿತಿಯೊಂದು ಹೊರ ಬಿದ್ದಿದೆ.

ಸಮೀಕ್ಷೆಗೊಳಪಟ್ಟ 18 ರಾಜ್ಯಗಳ ಪೈಕಿ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಶೇ 30ರಷ್ಟು ಮಹಿಳೆಯರು ತಮ್ಮ ಪತಿಯರು ತಮಗೆ ಹೊಡೆಯುವುದನ್ನು (ದೈಹಿಕ ಹಲ್ಲೆ) ಸಮರ್ಥಿಸಿಕೊಂಡಿದ್ದಾರೆ ಎಂದು ಎನ್‌ಎಫ್‌ಎಚ್‌ಎಸ್‌–5 ಸಮೀಕ್ಷೆ ಹೇಳಿದೆ.

ತೆಲಂಗಾಣದಲ್ಲಿ ಶೇ 84, ಆಂಧ್ರ ಪ್ರದೇಶದಲ್ಲಿ ಶೇ 84 ಮತ್ತು ಕರ್ನಾಟಕದಲ್ಲಿ ಶೇ 77ರಷ್ಟು ಮಹಿಳೆಯರು ತಮ್ಮ ಪತಿಯರು ಥಳಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ಮಣಿಪುರ (ಶೇ 66), ಕೇರಳ (ಶೇ 52), ಜಮ್ಮು ಮತ್ತು ಕಾಶ್ಮೀರ (ಶೇ 49), ಮಹಾರಾಷ್ಟ್ರ (ಶೇ 44), ಪಶ್ಚಿಮ ಬಂಗಾಳದ (ಶೇ 42) ಮಹಿಳೆಯರೂ ಸಹ ಇದನ್ನು ಸಮರ್ಥಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಅತಿ ಕಡಿಮೆ ಅಂದರೆ ಶೇ 14.8ರಷ್ಟು ಮಹಿಳೆಯರು ತಮ್ಮ ಪತಿಯ ಈ ರೀತಿಯ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.