ADVERTISEMENT

ಆಕ್ಸಿಜನ್‌ ಟ್ಯಾಂಕರ್‌ಗಳಿಗೆ ಶುಲ್ಕದಿಂದ ವಿನಾಯಿತಿ: ಎನ್‌ಎಚ್‌ಎಐ

ಪಿಟಿಐ
Published 8 ಮೇ 2021, 15:00 IST
Last Updated 8 ಮೇ 2021, 15:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ದ್ರವೀಕೃತ ವೈದ್ಯಕೀಯ ಆಮ್ಲಜನಕ ಒಯ್ಯುವ ಟ್ಯಾಂಕರ್‌ಗಳಿಗೆ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ (ಎನ್‌ಎಚ್‌ಎಐ) ಶನಿವಾರ ಪ್ರಕಟಿಸಿದೆ.

ಕೋವಿಡ್‌ ಸಾಂಕ್ರಾಮಿಕದ ಕಾರಣ ವೈದ್ಯಕೀಯ ಆಮ್ಲಜನಕಗಳಿಗೆ ಅಭೂತಪೂರ್ವ ಬೇಡಿಕೆ ಬಂದಿರುವ ಕಾರಣ ಆಂಬುಲೆನ್ಸ್‌ ರೀತಿ ಇದನ್ನೂ ತುರ್ತುಸೇವೆ ಎಂದು ಪರಿಗಣಿಸಲಾಗುವುದು. ಈ ವಿನಾಯಿತಿ ಎರಡು ತಿಂಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.

ಫಾಸ್ಟ್‌ಟ್ಯಾಗ್‌ ಅಳವಡಿಕೆ ಜಾರಿಗೆ ಬಂದ ಮೇಲೆ ಕಾಯುವಿಕೆ ಪ್ರಮಾಣ ಕಡಿಮೆಯಾಗಿದ್ದರೂ, ಆಕ್ಸಿಜನ್‌ ಕಂಟೇನರ್‌ ಸಾಗಿಸುವಂಥ ವಾಹನಗಳಿಗೆ ತಡೆಯಿಲ್ಲದೇ ಸಂಚರಿಸಲು ಈಗಾಗಲೇ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.