ADVERTISEMENT

ಐಎಸ್‌ ನಂಟು: ಬೆಂಗಳೂರಿನ ಯುವಕನ ಬಂಧನ

ಪಿಟಿಐ
Published 24 ಅಕ್ಟೋಬರ್ 2021, 20:53 IST
Last Updated 24 ಅಕ್ಟೋಬರ್ 2021, 20:53 IST
   

ನವದೆಹಲಿ: ಇಸ್ಲಾಮಿಕ್‌ ಸ್ಟೇಟ್‌ (ಐಎಸ್) ಸಂಘಟನೆಗೆ ಸೇರಿದ ಉಗ್ರ ಎನ್ನಲಾದ, ಬೆಂಗಳೂರಿನ ಮುಹಮ್ಮದ್‌ ತಾಖಿರ್‌ ಮೊಹಮ್ಮದ್‌ (33) ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾಗಿ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಮೂಲಭೂತವಾದವನ್ನು ಪಸರಿಸಿ ಹಾಗೂ ಮುಸ್ಲಿಂ ಸಮುದಾಯದ ಯುವಕರನ್ನು ವಂಚಿಸಿ ಐಎಸ್ ಸಂಘಟನೆಗೆ ಸೇರಿಸಲು ಸಿರಿಯಾಕ್ಕೆ ಕಳುಹಿಸುತ್ತಿದ್ದ ಆರೋಪದ ಮೇಲೆ ಮುಹಮ್ಮದ್‌ನನ್ನು ಶನಿವಾರವೇ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ನಿಷೇಧಿತ ಸಂಘಟನೆಯ ಜೊತೆ ನಂಟು ಹೊಂದಿದ ಆರೋಪದ ಮೇಲೆ ಮುಹಮ್ಮದ್‌ ಜೊತೆಗೆ ಜುಹಾಬ್‌ ಹಮೀದ್‌, ಇಫ್ರಾನ್‌ ನಾಸಿರ್‌ ಹಾಗೂ ಮೊಹಮ್ಮದ್‌ ಶಿಹಾಬ್‌ ಎಂಬ ಇತರ ಮೂವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ADVERTISEMENT

ಆರೋಪಿ ಮುಹಮ್ಮದ್‌, ಐಎಸ್‌ ನಾಯಕರ ಸಂಪರ್ಕ ಸಾಧಿಸಲು 2013ರಲ್ಲಿ ತನ್ನ ಸಹವರ್ತಿಗಳೊಂದಿಗೆ ಸಿರಿಯಾಕ್ಕೆ ಭೇಟಿ ನೀಡಿದ್ದ. ಭಾರತದ ಮುಸ್ಲಿಮರ ಬೆಂಬಲ ಒದಗಿಸುವುದಾಗಿಯೂ ಹೇಳಿದ್ದ. ತನಿಖೆ ಮುಂದುವರಿದಿದೆ ಎಂದು ಎಂದು ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.