ADVERTISEMENT

ಮುಂದುವರಿದ ಎನ್‌ಐಎ ದಾಳಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 19:56 IST
Last Updated 29 ಅಕ್ಟೋಬರ್ 2020, 19:56 IST

ಶ್ರೀನಗರ: ಸಮಾಜಸೇವೆ ಹೆಸರಿನಲ್ಲಿ ದೇಣಿಗೆ ಪಡೆದು ಅದನ್ನು ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದಿ

ಚಟುವಟಿಕೆಗಳಿಗೆ ಬಳಸುತ್ತಿದ್ದ ಆರೋಪದಲ್ಲಿ ಎನ್‌ಜಿಒಗಳ ಕಚೇರಿಗಳಲ್ಲಿ ಎರಡನೇ ದಿನವೂ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶೋಧ ಮುಂದುವರಿಸಿದೆ.

ದೆಹಲಿಯ ಒಂದು ಕಡೆ ಹಾಗೂ ಶ್ರೀನಗರದ 9 ಕಡೆ ಗುರುವಾರ ಶೋಧ ನಡೆಸಿದಅಧಿಕಾರಿಗಳು ದಾಖಲೆ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಿದ್ದಾರೆ.

ಫಲಾಹ್–ಎ–ಆಮ್ ಟ್ರಸ್ಟ್, ಚಾರಿಟಿ ಅಲಯನ್ಸ್, ಹ್ಯೂಮನ್ ವೆಲ್‌ಫೇರ್ ಫೌಂಡೇಷನ್, ಜೆಕೆ ಯತೀಮ್ ಫೌಂಡೇಷನ್, ಸಾಲ್ವೇಷನ್ ಮೂವ್‌ಮೆಂಟ್ ಮತ್ತು ಜೆ ಅಂಡ್ ಕೆ ವಾಯ್ಸ್ ಆಫ್ ವಿಕ್ಟಿಮ್ಸ್ ಸಂಸ್ಥೆಗಳಲ್ಲಿ ಶೋಧ ನಡೆದಿದೆ. ಕಾಶ್ಮೀರ ಹಾಗೂ ಬೆಂಗಳೂರಿನಲ್ಲಿ ಬುಧವಾರ ಶೋಧ ನಡೆಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.