ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಶಂಕಿತ ರೂವಾರಿ ಮತ್ತು ಇತರ ಇಬ್ಬರನ್ನು ಹತ್ಯೆಗೈದ ಬಗ್ಗೆ ಎನ್‌ಐಎ ತಂಡವು ಮಂಗಳವಾರ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಎನ್‌ಐಎ ತಂಡವು ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದು ಮೂವರು ಭಯೋತ್ಪಾದಕರ ಮೃತದೇಹಗಳ ಗುರುತನ್ನು ಪರಿಶೀಲಿಸಿತು, ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿತು ಎಂದು ಮಾಹಿತಿ ನೀಡಿದರು.
ಸೇನಾಪಡೆಯ ಪ್ಯಾರಾ ಕಮಾಂಡೊಗಳು ಹರ್ವನ್ ಪ್ರದೇಶದ ಮುಲ್ನಾರ್ ಅರಣ್ಯದಲ್ಲಿ ಸೋಮವಾರ, ‘ಆಪರೇಷನ್ ಮಹಾದೇವ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಪಹಲ್ಗಾಮ್ ದಾಳಿಯ ಸಂಚುಕೋರ ಸುಲೇಮಾನ್ ಅಲಿಯಾಸ್ ಆಸಿಫ್ ಹಾಗೂ ಜಿಬ್ರಾನ್ ಮತ್ತು ಹಮ್ಜಾ ಅಫ್ಗನಿಯನ್ನು ಹತ್ಯೆಗೈದಿದ್ದರು.
ಈ ಪ್ರದೇಶದಲ್ಲಿ ಉಗ್ರರ ಮತ್ತೊಂದು ಗುಂಪು ಅಡಗಿ ಕುಳಿತ ಗುಪ್ತಚರ ಮಾಹಿತಿ ಲಭ್ಯವಾಗಿರುವ ಕಾರಣ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.