ಅಪಘಾತ
–ಪ್ರಾತಿನಿಧಿಕ ಚಿತ್ರ
ಹೋಶಿಯಾರ್‌ಪುರ (ಪಂಜಾಬ್): ಜಿಲ್ಲೆಯ ಸಗ್ರಾನ್ ಗ್ರಾಮದ ಬಳಿ ಮಿನಿ ಬಸ್ ಪಲ್ಟಿಯಾಗಿ 9 ಮಂದಿ ಸಾವಿಗೀಡಾಗಿದ್ದು, 33 ಜನ ಗಾಯಗೊಂಡಿದ್ದಾರೆ.
40ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದ ಬಸ್, ಹಾಜಿಪುರದಿಂದ ದಸುಯಾಗೆ ತೆರಳುತ್ತಿತ್ತು. ಮಾರ್ಗ ಮಧ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳದಲ್ಲಿ ಕಾರೊಂದು ಕೂಡ ಜಖಂಗೊಂಡಿರುವುದು ಕಂಡುಬಂದಿದೆ.
ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೋಶಿಯಾರ್‌ಪುರ ಜಿಲ್ಲಾಧಿಕಾರಿ ಆಶಿಕಾ ಜೈನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.