ADVERTISEMENT

ಬಿಹಾರ: ಕಾರು ಹೊಂಡಕ್ಕೆ ಬಿದ್ದು 9 ಸಾವು

ಪಿಟಿಐ
Published 11 ಜೂನ್ 2022, 16:03 IST
Last Updated 11 ಜೂನ್ 2022, 16:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪೂರ್ನಿಯಾ, ಬಿಹಾರ (ಪಿಟಿಐ): ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಕಾರೊಂದು ರಸ್ತೆ ಬದಿಯ ಹೊಂಡಕ್ಕೆ ಬಿದ್ದುದರಿಂದ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

‘ನತದೃಷ್ಟರು ಪೂರ್ನಿಯಾದ ತಾರಾಬಾದ್‌ನಲ್ಲಿ ತಿಲಕ ಕಾರ್ಯಕ್ರಮವನ್ನು (ಮದುವೆಗೂ ಮುನ್ನದ ಕಾರ್ಯಕ್ರಮ) ಮುಗಿಸಿಕೊಂಡು ಎಸ್‌ಯುವಿ ಕಿಶನ್‌ಗಂ‌ಜ್‌ ಜಿಲ್ಲೆಯ ನಾನಿಯಾ ಗ್ರಾಮಕ್ಕೆ ತೆರಳುತ್ತಿದ್ದರು’ ಎಂದು ಬೈಸಿಯ ಉಪವಿಭಾಗಾಧಿಕಾರಿ ಕುಮಾರಿ ತೌಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT