ADVERTISEMENT

ನೀರವ್‌ ಮೋದಿ ಹಸ್ತಾಂತರಕ್ಕೆ ಸಕಲ ಪ್ರಯತ್ನ: ಸಿಬಿಐ

ಪಿಟಿಐ
Published 19 ಮಾರ್ಚ್ 2019, 19:03 IST
Last Updated 19 ಮಾರ್ಚ್ 2019, 19:03 IST
ನೀರವ್ ಮೋದಿ
ನೀರವ್ ಮೋದಿ   

ನವದೆಹಲಿ: ವಜ್ರದ ವ್ಯಾಪಾರಿ ನೀರವ್‌ ಮೋದಿ ಹಸ್ತಾಂತರಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಸಿಬಿಐ ಮೂಲಗಳು ಮಂಗಳವಾರ ತಿಳಿಸಿದೆ.

ಲಂಡನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸಿಬಿಐ ಮತ್ತು ಇ.ಡಿ ಮೇಲ್ವಿಚಾರಣೆ ನಡೆಸುತ್ತಿದೆ. ಆರೋಪಿ ಹಸ್ತಾಂತರದ ಕಾನೂನು ಪ್ರಕ್ರಿಯೆಗೆ ಅದರದೇ ಆದ ಸಮಯ ಬೇಕಾಗುತ್ತದೆ ಎನ್ನಲಾಗಿದೆ.

ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ ವಿರುದ್ಧ ಲಂಡನ್‌ ನ್ಯಾಯಾಲಯ ಸೋಮವಾರ ಬಂಧನ ವಾರಂಟ್‌ ಹೊರಡಿಸಿದೆ ಎಂದು ಇ.ಡಿ. ಮಂಗಳವಾರ ಹೇಳಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.