ADVERTISEMENT

ನೀರವ್‌ಗೆ ಸೆ.19 ರವರೆಗೆ ನ್ಯಾಯಾಂಗ ಬಂಧನ

ಪಿಟಿಐ
Published 22 ಆಗಸ್ಟ್ 2019, 20:15 IST
Last Updated 22 ಆಗಸ್ಟ್ 2019, 20:15 IST
ನೀರವ್ ಮೋದಿ
ನೀರವ್ ಮೋದಿ   

ಲಂಡನ್‌: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ವಿಚಾರಣೆಗಾಗಿ ಬ್ರಿಟನ್‌ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಗುರುವಾರ ಹಾಜರಾಗಿದ್ದರು.

ಸೆಪ್ಟೆಂಬರ್‌ 19ರ ವರೆಗೆ ಆರೋಪಿಯ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.

ನೀರವ್‌ ಹಸ್ತಾಂತರ ಸಂಬಂಧ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ತಾನ್‌ ಇಕ್ರಂ ಅವರ ನೇತೃತ್ವದಲ್ಲಿ ಈ ವಿಚಾರಣೆ ನಡೆಸಲಾಯಿತು.

ADVERTISEMENT

ಸೆ.19 ರಂದು ಮತ್ತೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗುವಂತೆ ನ್ಯಾಯಮೂರ್ತಿಗಳು ತಿಳಿಸಿದರು.

ನೀರವ್‌ ಮೋದಿಯನ್ನು ನೈರುತ್ಯ ಲಂಡನ್‌ನಲ್ಲಿರುವ ವಾಂಡ್ಸ್‌ವರ್ಥ್‌ ಕಾರಾಗೃಹದಲ್ಲಿ ಇರಿಸಲಾಗಿದೆ. ನೀರವ್‌ ಅವರನ್ನು ಬಂಧಿಸಿದ ನಂತರ ಸಲ್ಲಿಸಲಾದ ಎಲ್ಲಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಭಾರತಕ್ಕೆ ಹಸ್ತಾಂತರಿಸುವ ವಿರುದ್ಧ ನೀರವ್‌ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.