ADVERTISEMENT

ಕೋವಿಡ್ ಲಸಿಕೆಗಾಗಿ ತೆಲಂಗಾಣ ಕರೆದಿದ್ದ ಜಾಗತಿಕ ಟೆಂಡರ್‌ಗೆ ಬಿಡ್‌ಗಳೇ ಇಲ್ಲ

ಪಿಟಿಐ
Published 4 ಜೂನ್ 2021, 16:35 IST
Last Updated 4 ಜೂನ್ 2021, 16:35 IST
ಕೋವಿಡ್‌ ಲಸಿಕೆ (ಸಾಂದರ್ಭಿಕ ಚಿತ್ರ)
ಕೋವಿಡ್‌ ಲಸಿಕೆ (ಸಾಂದರ್ಭಿಕ ಚಿತ್ರ)   

ಹೈದರಾಬಾದ್: ಒಂದು ಕೋಟಿ ಕೋವಿಡ್‌ ಲಸಿಕೆ ಖರೀದಿಸಲು ಹೊರಡಿಸಿದ ಜಾಗತಿಕ ಟೆಂಡರ್‌ಗೆ ಸರಬರಾಜುದಾರರಿಂದ ಯಾವುದೇ ಬಿಡ್‌ಗಳು ಬಂದಿಲ್ಲ ಎಂದು ತೆಲಂಗಾಣ ಸರ್ಕಾರದ ಮೂಲಗಳು ಶುಕ್ರವಾರ ತಿಳಿಸಿವೆ.

ಜಾಗತಿಕ ಟೆಂಡರ್‌ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಮೇ 27ರಂದು ನಡೆದ ಬಿಡ್‌ ಪೂರ್ವ ಸಭೆಯಲ್ಲಿ ‘ಅಸ್ಟ್ರಾಜೆನೆಕಾ’ ಮತ್ತು ‘ಸ್ಪುಟ್ನಿಕ್ ವಿ’ ಪ್ರತಿನಿಧಿಗಳು ಮತ್ತು ಕೆಲವು ವ್ಯಾಪಾರ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ,‘ಲಸಿಕೆ ಸರಬರಾಜು ಮತ್ತು ಟೆಂಡರ್ ಸಂಬಂಧಿತ ದಾಖಲೆಗಳು ಸೂಕ್ತವಾಗಿರಬೇಕು ಎಂದು ತೆಲಂಗಾಣ ರಾಜ್ಯ ವೈದ್ಯಕೀಯ ಸೇವೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.