ADVERTISEMENT

ಮುಖ್ಯ ಅರ್ಚಕರ ವಿರುದ್ಧ ಸಣ್ಣ ಸಾಕ್ಷ್ಯವೂ ಇಲ್ಲ; ನ್ಯಾಯಾಲಯ

ಶಬರಿಮಲೆ ಚಿನ್ನ ಕಳವು ಪ್ರಕರಣ; ಮುಖ್ಯ ಅರ್ಚಕರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 16:08 IST
Last Updated 19 ಫೆಬ್ರುವರಿ 2026, 16:08 IST
ಶಬರಿಮಲೆ ದೇವಾಲಯ
ಶಬರಿಮಲೆ ದೇವಾಲಯ   

ಕೊಲ್ಲಂ, ಕೇರಳ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಮುಖ್ಯ ಅರ್ಚಕ ಕಂಡರಾರು ರಾಜೀವರು  ಅವರ ವಿರುದ್ಧ ಸಣ್ಣ ಸಾಕ್ಷ್ಯವೂ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ದೇವಸ್ಥಾನದ ‘ಶ್ರೀಕೋವಿಲ್‌’ನ ಬಾಗಿಲ ಚೌಕಟ್ಟಿನ ಚಿನ್ನದ ತೂಕ ಕಡಿಮೆಯಾಗಿರುವ ಪ್ರಕರಣದಲ್ಲಿ 16ನೇ ಆರೋಪಿಯಾಗಿದ್ದ ಕಂಡರಾರು ರಾಜೀವ ಅವರನ್ನು ಬಂಧಿಸಿ, ತಿರುವನಂತಪುರದ ವಿಶೇಷ ಉಪ ಕಾರಾಗೃಹದಲ್ಲಿರಿಸಲಾಗಿತ್ತು. ಕೊಲ್ಲಂ ವಿಜಿಲೆನ್ಸ್‌ ಕೋರ್ಟ್‌ನಿಂದ ಅನುಮತಿ ಪಡೆದುಕೊಂಡ ಎಸ್‌ಐಟಿ ತಂಡವು ಎರಡನೆಯ ಪ್ರಕರಣವಾದ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ತಾಮ್ರದ ಕವಚಕ್ಕೆ ಲೇಪಿಸಿದ್ದ ಚಿನ್ನ ಕಳವು ಪ್ರಕರಣದಲ್ಲಿ 13ನೇ ಆರೋಪಿಯಾಗಿ ಕಂಡರಾರು ಅವರನ್ನು ಇದೇ ವರ್ಷ ಜನವರಿ 15ರಂದು ಬಂಧಿಸಿತ್ತು.

ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ಕೊಲ್ಲಂ ವಿಜಿಲೆನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಮೋಹಿತ್‌ ಸಿ.ಎಸ್‌ ಅವರು ಮುಖ್ಯ ಅರ್ಚಕರಿಗೆ ಜಾಮೀನು ಮಂಜೂರು ಮಾಡಿದರು. 

ADVERTISEMENT

ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 31ರಂದು ಅಂತಿಮ ವರದಿ ಸಲ್ಲಿಸಲಾಗುವುದು ಎಂದು ವಿಶೇಷ ತನಿಖಾ ತಂಡವು ಕೇರಳ ಹೈಕೋರ್ಟ್‌ಗೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.