ADVERTISEMENT

ನಿರುದ್ಯೋಗ: ಯುವಜನರು ಎಷ್ಟು ದಿನ ತಾಳ್ಮೆಯಿಂದ ಕಾಯಬೇಕು– ವರುಣ್‌ ಗಾಂಧಿ

ಪಿಟಿಐ
Published 2 ಡಿಸೆಂಬರ್ 2021, 10:52 IST
Last Updated 2 ಡಿಸೆಂಬರ್ 2021, 10:52 IST
ವರುಣ್‌ ಗಾಂಧಿ
ವರುಣ್‌ ಗಾಂಧಿ   

ನವದೆಹಲಿ (ಪಿಟಿಐ): ‘ಸರ್ಕಾರಿ ಉದ್ಯೋಗದ ಅವಕಾಶಗಳು ಕಡಿಮೆಯಾಗಿವೆ. ಯುವಜನರು ಭ್ರಮನಿರಸನಗೊಂಡಿದ್ದಾರೆ. ಅವರು ಇನ್ನೂ ಎಷ್ಟು ದಿನ ತಾಳ್ಮೆಯಿಂದ ಕಾಯಬೇಕು’ ಎಂದು ಬಿಜೆಪಿ ಸಂಸದ ವರುಣ್‌ ಗಾಂಧಿ ಗುರುವಾರ ಪ್ರಶ್ನಿಸಿದ್ದಾರೆ.

‘ಗ್ರಾಮೀಣ ಯುವಜನರಿಗೆ ಸರ್ಕಾರಿ ನೌಕರಿ ಸಿಗುವ ಅವಕಾಶಗಳೇ ಕುಗ್ಗಿವೆ. ಇನ್ನೊಂದೆಡೆ, ಸರ್ಕಾರವೇ ರಕ್ಷಣೆ, ಪೊಲೀಸ್‌, ರೈಲ್ವೆ ಇಲಾಖೆ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ನೇಮಕಾತಿ ಮಾಡುತ್ತಿದೆ’ ಎಂದಿದ್ದಾರೆ.

‘ಮೊದಲಿಗೆ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಆಗುತ್ತಿಲ್ಲ. ಪ್ರಕ್ರಿಯೆ ನಡೆದರೂ ಪ್ರಶ್ನೆಪತ್ರಿಕೆಯೇ ಸೋರಿಕೆ ಆಗಲಿದೆ. ವರ್ಷಗಟ್ಟಲೆ ಫಲಿತಾಂಶ ಬರುವುದಿಲ್ಲ ಅಥವಾ ಹಗರಣ ನಡೆದು ಪ್ರಕ್ರಿಯೆಯೇ ರದ್ದಾಗಲಿದೆ. ರೈಲ್ವೆ ಇಲಾಖೆಯ ‘ಡಿ ಗ್ರೂಪ್’ ಹುದ್ದೆಗಾಗಿಯೇ 1.25 ಕೋಟಿ ಯುವಜನರು ಕಾಯುತ್ತಿದ್ದಾರೆ. ಸೇನೆ ನೇಮಕಾತಿಯಲ್ಲೂ ಇದೇ ಪರಿಸ್ಥಿತಿ ಇದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಉತ್ತರ ಪ್ರದೇಶದಲ್ಲೇ ಎರಡು ವರ್ಷದಲ್ಲಿ 17 ಪರೀಕ್ಷೆಗಳು ರದ್ದಾಗಿವೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿಲ್ಲ. ಖಾಸಗಿ ಉದ್ಯೋಗ ಒದಗಿಸಲು ವ್ಯವಸ್ಥೆ ಇಲ್ಲ. ನೇಮಕಾತಿ ಪ್ರಕ್ರಿಯೆಗೆ ನಿರ್ದಿಷ್ಟವಾದ ವೇಳಾಪಟ್ಟಿ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಲೋಕಸಭೆಯಲ್ಲಿ ಪಿಲಿಭಿಟ್‌ ಕ್ಷೇತ್ರವನ್ನು ಪ್ರತಿನಿಧಿಸುವ ವರುಣ್‌ ಗಾಂಧಿ, ಆರ್ಥಿಕತೆ ಮತ್ತು ಉದ್ಯೋಗ ಸಂಬಂಧಿ ವಿಷಯಗಳ ನಿರ್ವಹಣೆಗೆ ಸಂಬಂಧಿಸಿಇತ್ತೀಚಿನ ದಿನಗಳಲ್ಲಿ ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.