ADVERTISEMENT

ಕರ್ತಾರಪುರ: ಭಾರತೀಯ ಯಾತ್ರಾರ್ಥಿಗೆ ಪಾಸ್‌ಪೋರ್ಟ್‌ ಅಗತ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 20:11 IST
Last Updated 1 ನವೆಂಬರ್ 2019, 20:11 IST

ಇಸ್ಲಾಮಾಬಾದ್‌ (ಪಿಟಿಐ): ಐತಿಹಾಸಿಕಪುಣ್ಯಕ್ಷೇತ್ರ ಕರ್ತಾರಪುರಕ್ಕೆ ತೆರಳುವ ಭಾರತದ ಸಿಖ್‌ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್‌ ಅಗತ್ಯವಿಲ್ಲ. ಅಧಿಕೃತ ಗುರುತಿನ ಚೀಟಿ ಇದ್ದರೆ ಸಾಕು ಎಂದುಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಶುಕ್ರವಾರ ಘೋಷಿಸಿದ್ದಾರೆ.

ಪ್ರಯಾಣದ ದಿನಕ್ಕಿಂತ 10 ದಿನ ಮುಂಚಿತವಾಗಿ ಭಾರತ ಯಾತ್ರಿಗಳ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡುವ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಲಾಗಿದೆ.ಉದ್ಘಾಟನೆ ದಿನಯಾತ್ರಾರ್ಥಿಗಳಿಗೆ ಪವೇಶ ಉಚಿತವಾಗಿರುತ್ತದೆ ಎಂದು ಅವರುಟ್ವೀಟ್‌ ಮಾಡಿದ್ದಾರೆ.

ಐತಿಹಾಸಿಕ ಕರ್ತಾರಪುರ ಕಾರಿಡಾರ್‌ ಸಂಚಾರಕ್ಕೆ ಚಾಲನೆ ನೀಡುವ ಒಪ್ಪಂದಕ್ಕೆ ಭಾರತ ಹಾಗೂ ಪಾಕಿಸ್ತಾನ ಕಳೆದ ವಾರ ಸಹಿ ಹಾಕಿತು.

ADVERTISEMENT

ಒಪ್ಪಂದದ ಅನುಸಾರ ಪ್ರತಿ ದಿನ 5 ಸಾವಿರ ಭಾರತೀಯ ಯಾತ್ರಾತ್ರಿಗಳಿಗೆ ಇಲ್ಲಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ.

ಭಾರತೀಯ ಯಾತ್ರಿಗಳಿಗೆ ಶುಲ್ಕ ವಿಧಿಸಬಾರದು ಎನ್ನುವುದು ಭಾರತದ ಬೇಡಿಕೆ. ಆದರೆ ಪಾಕಿಸ್ತಾನ ಪ್ರತಿ ಭಾರತೀಯ ಯಾತ್ರಿಗೆ 20 ಡಾಲರ್ (ಅಂದಾಜು ₹1,400) ಶುಲ್ಕ ವಿಧಿಸಲಿದೆ.

ಪಂಜಾಬ್‌ನ ಗುರುದಾಸಪುರ ಡೇರಾ ಬಾಬಾ ನಾನಕ್‌ನಿಂದ ಪಾಕಿಸ್ತಾನದಲ್ಲಿರುವ ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಈ ಕಾರಿಡಾರ್‌ ಸಂಪರ್ಕ ಕಲ್ಪಿಸಲಿದ್ದು ನವೆಂಬರ್‌ 9ಕ್ಕೆ ಉದ್ಘಾಟನೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.