ADVERTISEMENT

ಎಫ್‌–16 ಯುದ್ಧ ವಿಮಾನ ಖರೀದಿಗೆ ಒತ್ತಡ ಹೇರುವುದಿಲ್ಲ:ಅಮೆರಿಕ ಕಾನ್ಸುಲ್‌ ಜನರಲ್‌

ಪಿಟಿಐ
Published 28 ಅಕ್ಟೋಬರ್ 2018, 20:32 IST
Last Updated 28 ಅಕ್ಟೋಬರ್ 2018, 20:32 IST

ಮುಂಬೈ: ಎಫ್‌–16 ಯುದ್ಧ ವಿಮಾನ ಅಥವಾ ಇತರ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವಂತೆ ಭಾರತದ ಮೇಲೆ ಒತ್ತಡ ಹೇರುವುದಿಲ್ಲ ಎಂದು ಅಮೆರಿಕದ ಕಾನ್ಸುಲ್‌ ಜನರಲ್‌ ಎಡ್ಗರ್ಡ್‌ ಕಗನ್‌ ಹೇಳಿದ್ದಾರೆ.

ಭಾರತವು ಈಗಾಗಲೇ ಅಮೆರಿಕದಿಂದ ಅಂದಾಜು ₹1.11 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಿದೆ. ಭಾರತದ ಜೊತೆ ರಕ್ಷಣಾ ಒಪ್ಪಂದ ಮುಂದುವರಿಸಲು ಅಮೆರಿಕ ಹೆಮ್ಮೆಪಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಷ್ಯಾದಿಂದ ಎಸ್–400 ಟ್ರೈಂಫ್ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿರುವ ಕಾರಣ ಅಮೆರಿಕ ಭಾರತದ ಮೇಲೆ ವ್ಯಾಪಾರ ನಿರ್ಬಂಧ ಹೇರಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ನೇರ ಉತ್ತರ ನೀಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.